ಸಂಪಾಜೆ: ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆ : ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳು
ಸಂಪಾಜೆ ದಬ್ಬಡ್ಕ ವಲಯದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ದಾಳಿ ನೆಡೆಸಿ ರೆಡ್ ಹ್ಯಾಂಡ್ ಆಗಿ ಇಬ್ಬರು ಆರೋಪಿಗಳನ್ನು ಸರೆಹಿಡಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳು ದಬ್ಬಡ್ಕ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಮತ್ತು ಪುರುಷೋತ್ತಮ ಕೆ.ಎಸ್ ಎಂದು ತಿಳಿದು ಬಂದಿದೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿಗಳಾದ ಎ.ಟಿ.ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯ ಅಧಿಕಾರಿ ಮಧುಸೂದನ್ ಎಂ.ಕೆ ರವರ ನೇತೃತ್ವದಲ್ಲಿ ಶಾಖೆಯ ಉಪ ಅರಣ್ಯ ಅಧಿಕಾರಿಗಳಾದನಿಸಾರ್ ಅಹಮದ್, ಅರಣ್ಯ ರಕ್ಷಕರಾದ ಕಾರ್ತಿಕ್, ಅರಣ್ಯವೀಕ್ಷಕರಾದ ಕೂಸಪ್ಪ ಮತ್ತು ಮನೋಜ್ ಕುಮಾರ್ ಅವರ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ದಬ್ಬಡ್ಕ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಮತ್ತು ಪುರುಷೋತ್ತಮ ಕೆ.ಎಸ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಬಂಧಿತರಿಂದ ಅಂದಾಜು ನೂರು ಕೆ.ಜಿ ಕಡವೆ ಮಾಂಸ ಹಾಗೂ ಬೇಟೆಯಾಡಲು ಉಪಯೋಗಿಸಿದ ಕತ್ತಿ, ಮಚ್ಚು, ಟರ್ಪಲ್ ಹಗ್ಗ ಬಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ




