December 16, 2025

ಅಪಾರ್ಟ್‌ಮೆಂಟ್‌ಗೆ ನುಗ್ಗಿ ಮಗುವನ್ನು ಕಚ್ಚಿದ ಬೀದಿನಾಯಿ: 7 ತಿಂಗಳ ಮಗು ಸಾವು

0
image_editor_output_image-174118901-1666099327537.jpg

ನೊಯ್ಡಾ: ಬೀದಿನಾಯಿಯೊಂದು ಅಪಾರ್ಟ್‌ಮೆಂಟ್‌ಗೆ ನುಗ್ಗಿ ಏಳು ತಿಂಗಳ ಮಗುವನ್ನು ಕಚ್ಚಿ ಮಗು ಮೃತಪಟ್ಟ ದಾರುಣ ಘಟನೆ ದೆಹಲಿ ಸಮೀಪದ ನೊಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಸೆಕ್ಟರ್ 100ರಲ್ಲಿರುವ ಲೋಟಸ್ ಬೌಲೆವಾರ್ಡ್ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಸಂಜೆ 4.30ರ ಸುಮಾರಿಗೆ ಘಟನೆ ನಡೆದಿದೆ. ಕಟ್ಟಡ ಕಾರ್ಮಿಕರಾಗಿರುವ ಮಗುವಿನ ಪೋಷಕರು ಕಾಂಪ್ಲೆಕ್ಸ್‌ನ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ಮಗುವನ್ನು ಅವರ ಪಕ್ಕದಲ್ಲಿಯೇ ಕೂರಿಸಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಬೀದಿನಾಯಿ ಮಗುವಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಡರಾತ್ರಿ ವೇಳೆಗೆ ಮಗು ಸಾವನ್ನಪ್ಪದೆ ಎಂದು ಪೊಲೀಸ್ ಅಧಿಕಾರಿ ರಜನೀಶ್ ವರ್ಮಾ ತಿಳಿಸಿದ್ದಾರೆ.

ಮಗುವಿಗೆ ಬೀದಿ ನಾಯಿ ಕಚ್ಚಿದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಸೇರಿ ಬೀದಿನಾಯಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಜೀವಕ್ಕೇ ಅಪಾಯ ತರುವ ಬೀದಿನಾಯಿಗಳ ಸ್ಥಳಾಂತರಕ್ಕೆ ನಾಗರಿಕ ಸಂಸ್ಥೆಗಳು ವಿಫಲವಾಗಿವೆ. ನಾಯಿಗಳಿಗೆ ಕ್ರಿಮಿನಾಶಕ ಮತ್ತು ಲಸಿಕೆಯನ್ನೂ ಹಾಕುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇಲ್ಲಿನ ನಿವಾಸಿ ವಿನೋದ್ ಶರ್ಮಾ ಮಾತನಾಡಿ, ಜನರು ಬೀದಿನಾಯಿಗಳಿಗೆ ಆಹಾರ ಆಕುತ್ತಿದ್ದಾರೆ. ಇದರಿಂದ ಅವು ಇಲ್ಲೇ ಬೀಡುಬಿಟ್ಟಿವೆ. ನಾಯಿಗಳು ಆಕ್ರಮಣಕಾರಿ ಸ್ವಭಾವ ಬೆಳೆಸಿಕೊಂಡಿದ್ದು, ಆಗಾಗ ಇಂತಹ ಘಟನೆಗಳು ಮರುಕಳಿಸುತ್ತಿವೆ. ಮಕ್ಕಳನ್ನು ಭಯದಿಂದಲೇ ಹೊರ ಬಿಡಬೇಕಾಗಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!