August 13, 2026

ಉಡುಪಿ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ, ಬಿಜೆಪಿ ಮುಖಂಡನ ಅಂಗರಕ್ಷಕನಿಗೆ ಗಾಯ

0
image_editor_output_image-775765958-1666074435926.jpg

ಉಡುಪಿ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಅಂಗರಕ್ಷಕನಿಗೆ ಗಾಯವಾದ ಘಟನೆ ನಡೆದಿದೆ.

ಕೊಡವೂರು ನಿವಾಸಿ ಗಣೇಶ್ ಗಾಯಗೊಂಡವರು. ಅಕ್ಟೋಬರ್‍ 16ರಂದು ಕರ್ತವ್ಯದ ಹಿನ್ನೆಲೆಯಲ್ಲಿ ಅಜ್ಜರಕಾಡುವಿನಲ್ಲಿರುವ ಯಶ್‌ಪಾಲ್ ಸುವರ್ಣ ಅವರ ಮನೆಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು.

ಕರಾವಳಿ ಬೈಪಾಸ್ ಸರ್ವೀಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕರಾವಳಿ ಕಡೆಗೆ ಬರುತ್ತಿದ್ದ ರಾಹಿಲ್ ಅನ್ವರ್ ಅವರ ಸ್ಕೂಟರ್ ಢಿಕ್ಕಿ ಹೊಡೆದಿದೆ.

ರಾಹುಲ್ ಅವರು ಯಾವುದೇ ಸೂಚನೆ ನೀಡದೆ ಏಕಾಏಕಿ ಸರ್ವಿಸ್‌ ರಸ್ತೆಗೆ ಬಂದು ಢಿಕ್ಕಿ ಹೊಡೆದಿದ್ದು, ಇದರಿಂದಾಗಿ ಗಣೇಶ್ ಅವರಿಗೆ ಮೂಳೆ ಮುರಿತ ಮತ್ತು ರಕ್ತಗಾಯ ಉಂಟಾಗಿದೆ.

ಗಾಯಾಳು ಗಣೇಶ್ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!