February 4, 2026

ಪ್ರೀತಿಸಲು ನಿರಾಕರಣೆ: ವಿದ್ಯಾರ್ಥಿನಿಯನ್ನು ರೈಲಿನಡಿಗೆ ತಳ್ಳಿ ಹತ್ಯೆ ಮಾಡಿದ ಪ್ರಿಯಕರ

0
image_editor_output_image284336681-1665738248278.jpg

ಚೆನ್ನೈ: ಪ್ರೀತಿಸಲು ನಿರಾಕರಿಸಿಕ್ಕೆ ಪ್ರಿಯಕರ ರೈಲು ಬರುತ್ತಿದ್ದ ವೇಳೆ ವಿದ್ಯಾರ್ಥಿಯನ್ನು ತಳ್ಳಿ ಹತ್ಯೆ ಮಾಡಿದ್ದು, ಇದರಿಂದ ಮನನೊಂದ ಆಕೆಯ ತಂದೆ ಮಣಿಕ್ಕಮ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾಲೇಜು ವಿದ್ಯಾರ್ಥಿನಿ ಸತ್ಯಾ ಪ್ರೀತಿ ನಿರಾಕರಿಸಿಕ್ಕೆ ಸೈಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ಎದುರುಗಡೆಯಿಂದ ರೈಲು ಬರುತ್ತಿದ್ದ ವೇಳೆ ಆಕೆಯನ್ನು ತಳ್ಳಿ ಹಾಕಿ ಸತೀಶ್ ಎಂಬಾತ ಹತ್ಯೆ ಮಾಡಿದ್ದಾನೆ.

ಇನ್ನು ಮಣಿಕ್ಕಮ್ ಅವರು ಟ್ರಾವಲ್ ಕಂಪೆನಿಯೊಂದನ್ನು ನಡೆಸಿಕೊಂಡಿದ್ದು, ಮಗಳ ಹಠಾತ್ ಸಾವಿನಿಂದ ನೊಂದಿದ್ದ ತಂದೆ ತೀವ್ರ ಅಸ್ವಸ್ಥಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ದ್ವಿತೀಯ ವರ್ಷದ ಪದವಿ ಓದುತ್ತಿದ್ದ ಸತ್ಯಾ ಕಳೆದ ತಿಂಗಳಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದರಿಂದ ಕೋಪಗೊಂಡಿದ್ದ ಪಾಗಲ್ ಪ್ರೇಮಿ ಸತೀಶ್ ಆಕೆ ಕಾಲೇಜಿಗೆ ತೆರಳುತ್ತಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಹಿಂಬಾಲಿಸಿ ಅಲ್ಲಿ ವಾಗ್ವಾದ ನಡೆದಿದ್ದು, ತಾಂಬರಂನಿಂದ ಚೆನ್ನೈ ಬೀಚ್ಗೆ ಹೋಗುವ ರೈಲು ಹತ್ತಲು ತಯಾರಾಗುತ್ತಿದ್ದಾಗ ಆಕೆಯನ್ನು ರೈಲಿನ ಮುಂದೆ ತಳ್ಳಿದ್ದಾನೆ.

Leave a Reply

Your email address will not be published. Required fields are marked *

error: Content is protected !!