September 20, 2024

ಬಂಟ್ವಾಳ: ಮನೆಯ ಕಿಟಕಿಯ ರಾಡ್ ಮುರಿದು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

0

ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಒಳಬೈಲು ಎಂಬಲ್ಲಿ ನಡೆದಿದೆ.

ಒಳಬೈಲು ನಿವಾಸಿ ಸಿಲ್ವಿಯಾ ಫರ್ನಾಂಡೀಸ್ ಎಂಬವರ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ 25 ಗ್ರಾಂ ಚಿನ್ನವನ್ನು ಕಳವುಗೈಯಲಾಗಿದೆ.

ರಾತ್ರಿ ಮನೆಯಲ್ಲಿ ಯಾರು ಇಲ್ಲದ ಬಗ್ಗೆ ಖಾತ್ರಿ ಪಡಿಸಿದ ಕಳ್ಳರು ಕಿಟಕಿ ಮುರಿದು ಮನೆಯೊಳಗೆ ನುಗ್ಗಿ, ಕಪಾಟಿನಲ್ಲಿದ್ದ ಸುಮಾರು 1.20 ಲಕ್ಷ ಮೌಲ್ಯದ ಎರಡು ಉಂಗುರ, ಎರಡು ಕಿವಿಯೋಲೆ ಯನ್ನು ಕಳವು ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಎಸ್.ಐ.ಸುತೇಶ್ ಭೇಟಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!