ಕಟಪಾಡಿ: ಮಟ್ಟು ಬೀಚ್ ನಲ್ಲಿ ಭೂತಾಯಿ ಮೀನು ಸುಗ್ಗಿ ಶುಕ್ರವಾರ ಕಂಡು ಬಂದಿದೆ.
ಹನುಮ ದೀಕ್ಷಾ ಕೈರಂಪಣಿ ಮೀನುಗಾರಿಕೆ ಸಂದರ್ಭದಲ್ಲಿ ದೊಡ್ಡ ಗಾತ್ರದ ಭೂತಾಯಿ ಮೀನು ಬಲೆಯಲ್ಲಿ ಹಿಡಿಯಲಾಗಿದ್ದು, ಸುಮಾರು ನಾಲ್ಕು ಟನ್ ನಷ್ಟು ಮೀನು ಲಭಿಸುವ ಮೂಲಕ ಮೀನಿನ ಸುಗ್ಗಿಯೇ ಕಂಡು ಬಂದಿತ್ತು. ಸುದ್ದಿ ತಿಳಿದು ಸ್ಥಳಿಯರು ಸ್ಥಳಕ್ಕೆ ಧಾವಿಸಿದರು.