ಮುರುಘಾ ಶರಣರಿಗೆ ಮಕ್ಕಳ ಅಶ್ಲೀಲ ವೀಡಿಯೋ ನೋಡುವ ಚಟವಿತ್ತು: ಮತ್ತೊಂದು ಸ್ಫೋಟಕ ಮಾಹಿತಿ ಹೊರಹಾಕಿದ ಒಡನಾಡಿ ಸಂಸ್ಥೆ
ಮೈಸೂರು: ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಸತ್ಯ ಹೊರ ಬಿದ್ದಿದೆ.
ಮುರುಘಾ ಮಠದ ವಸತಿ ಶಾಲೆಯಲ್ಲಿದ್ದ (Murugha Mutt Residential School) ಕೆಲ ಹೆಣ್ಣು ಮಕ್ಕಳ ಅಶ್ಲೀಲ ವೀಡಿಯೋ (Video) ಸಹ ಮಾಡಲಾಗಿದ್ದು ಅದನ್ನು ಸ್ವಾಮೀಜಿಗಳಿಗೆ ಮಾರಾಟ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ
ಈ ಕುರಿತು ಮಾತನಾಡಿರುವ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್, ಮರುಘಾ ಮಠದ ವಸತಿ ಶಾಲೆಯಲ್ಲಿದ್ದ ಕೆಲ ಮಕ್ಕಳ ಬೆತ್ತಲೆ ವೀಡಿಯೋ ಮಾಡಿ ಸ್ವಾಮೀಜಿಗೆ ಮಾರಾಟ ಮಾಡಿದ್ದಾರೆ. ವೀಡಿಯೋ ಮಾಡುವ ವಿಚಾರದಲ್ಲಿ ಸ್ವಾಮೀಜಿಯ ಪಾತ್ರವೂ ಇದೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೇ ಈ ವಿಚಾರ ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.




