ಗ್ರಾಮ ಪಂಚಾಯತ್ ಚುನಾವಣಾ ದಿನವೇ ಗ್ರಾ.ಪಂ. ಸದಸ್ಯ ಕಿಡ್ನಾಪ್
ಕುಣಿಗಲ್: ಗ್ರಾಮ ಪಂಚಾಯತ್ ಚುನಾವಣಾ ದಿನವೇ ಗ್ರಾ.ಪಂ. ಸದಸ್ಯ ಕಿಡ್ನಾಪ್‌ಮ ಆದ ಘಟನೆ ತಾಲೂಕಿನ ಹುಲಿಯೂರು ದುರ್ಗ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ನಿಡಸಾಲೆ ಗ್ರಾ.ಪಂ.ನ ಮಂಜುನಾಥ್ ಕಿಡ್ನಾಪ್ ಆದ ಗ್ರಾ.ಪಂ. ಸದಸ್ಯ.
ಕಳೆದ ಮೂರು ದಿನಗಳ ಹಿಂದೆ ಮಂಜುನಾಥ್ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದು, ನಿನ್ನೆ ರಾತ್ರಿ ಪ್ರವಾಸ ಮುಗಿಸಿ ನಿಡಸಾಲೆಗೆ ಬರುವಾಗ, ಎಡೆಯೂರಿನ ಧಾರ್ಣಿಕ ಹೋಟೆಲ್ ಬಳಿ ಊಟಕ್ಕೆ ತೆರಳಿದ್ದ ಸಂದರ್ಭ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಈತನನ್ನು ಕಿಡ್ನಾಪ್ ಮಾಡಿದ್ದರು.




