February 3, 2026

ಪಣಂಬೂರು-ಕೆಐಒಸಿಎಲ್ ರಸ್ತೆಯ ಮುಖ್ಯ ಕೊಳವೆ ಒಡೆದು ನೀರು ಸೋರಿಕೆ: ನಾಳೆ ಮಂಗಳೂರಿಗೆ ನೀರು ಸರಬರಾಜು ಇಲ್ಲ

0
image_editor_output_image1203946788-1665642255393.jpg

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಪೈಪ್ ಲೈನ್ ಕಾಮಗಾರಿ ನಡೆಯಲಿದೆ.

ಪಣಂಬೂರು-ಕೆಐಒಸಿಎಲ್ ಮುಂದಿನ ಸರ್ವಿಸ್ ರಸ್ತೆಯ ಮುಖ್ಯ ಕೊಳವೆಯು ಒಡೆದು ನೀರು ಸೋರಿಕೆಯಾಗಿದ್ದು, ದುರಸ್ತಿಯ ಕಾರ್ಯ ನಡೆಯಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಅ.14ರ ಬೆಳಗ್ಗೆ 6ರಿಂದ ಅ.15ರ ಬೆಳಗ್ಗೆ 6ರವರೆಗೆ ಪಣಂಬೂರು, ಸುರತ್ಕಲ್, ಕೂಳೂರು, ಕೋಡಿಕಲ್, ಕಾಟಿಪಳ್ಳ, ಕಾನ, ಬಾಳ, ಕುಳಾಯಿ, ಮುಕ್ಕ, ಜಲ್ಲಿಗುಡ್ಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!