February 2, 2026

ಭಾರಿ ಮಳೆ, ಭೂಕುಸಿತ: 22 ಜನ ಸಾವು, 52 ಜನ ನಾಪತ್ತೆ

0
image_editor_output_image-109702866-1665376830814.jpg

ಲಾಸ್‌ ತೆಜೆರಿಯಸ್‌: ಉತ್ತರ ಕೇಂದ್ರ ವೆನುಜುವೆಲಾದಲ್ಲಿ ಶನಿವಾರದಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಭೂಕುಸಿತದಿಂದ ಕನಿಷ್ಠ 22 ಜನ ಸಾವನ್ನಪ್ಪಿದ್ದು, 52 ಜನ ನಾಪತ್ತೆಯಾಗಿದ್ದಾರೆ.

ಲಾಸ್‌ ತೆಜೆರಿಯಸ್‌ನಲ್ಲಿ ನಗರದ ಅನೇಕ ಮನೆಗಳು ನಾಶಗೊಂಡಿದ್ದು, ಗೊತ್ತಿಲ್ಲದಷ್ಟು ಸಂಖ್ಯೆಯ ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಶಸ್ತ್ರ ಸೇನಾ ಪಡೆ ರಕ್ಷಣಾ ಕಾರ್ಯದಲ್ಲಿ ಮಗ್ನವಾಗಿದ್ದು ಡ್ರೋನ್‌ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ನಾಪತ್ತೆಯಾದವರನ್ನು ಪತ್ತೆಮಾಡಲು ಮತ್ತು ಆಹಾರ ಹಾಗೂ ಔಷಧ ಪೂರೈಸಲು ನಿರ್ಧರಿಸಿವೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ಹೊರತರಲು ಸಾದ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ಈಗಾಗಲೆ 2 ಡಜನ್‌ ಜನರು ಸಾವನ್ನಪ್ಪಿದ್ದಾರೆ. ಮಕ್ಕಳು, ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದೇವೆ. ಇದೊಂದು ದುರಂತ’ ಎಂದು ವೆನುಜುವೆಲಾ ಉಪಾಧ್ಯಕ್ಷ ಡೆಲ್ಸಿ ರೊಡಿಗ್ರಸ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!