ಮೂಡುಬಿದಿರೆ: ಸ್ಕೂಟಿ ಸ್ಕಿಡ್ ಆಗಿ ಯುವಕ ಸಾವು
ಮೂಡುಬಿದಿರೆ: ಸ್ಕೂಟಿಯೊಂದು ಸ್ಕಿಡ್ ಆದ ಪರಿಣಾಮ ಯುವಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮೂಡಬಿದ್ರೆಯ ಕೋಟೆಬಾಗಿಲು ಬಳಿಯ ತಿರುವಿನಲ್ಲಿ ಬುಧವಾರ ಸಂಜೆ ನಡೆಡಿದೆ.
ಕೋಟೆ ಬಾಗಿಲು ಬಳಿಯ ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ ಪ್ರಶ್ವಿತ್ ಹೆಗ್ಡೆ (17 ) ಮೃತಪಟ್ಟ ಯುವಕ. ಶಿತಾ೯ಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ಪ್ರಶ್ವಿತ್ ಹೆಗ್ಡೆ ಮತ್ತು ದೀಕ್ಷಿತ್ ಹೆಗ್ಡೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದ್ದು ಪ್ರಶ್ವಿತ್ ಅವರ ತಲೆಗೆ ತೀವ್ರ ತರದ ಏಟಾಗಿತ್ತು ಎನ್ನಲಾಗಿದೆ.
ದೀಕ್ಷಿತ್ ತಲೆಗೂ ಗಾಯಗಳಾಗಿದ್ದು ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಶ್ವಿತ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






