February 1, 2026

ಕಾಸರಗೋಡು: ಕೊಲೆ ಯತ್ನ, ಗಾಂಜಾ ಸಾಗಾಟ, ಅಪಹರಣ ಪ್ರಕರಣ:
ಆರೋಪಿಯ ವಿರುದ್ಧ ಕಾಫಾ ಕಾಯ್ದೆ ಹೂಡಿದ ಪೊಲೀಸರು

0
IMG-20211109-WA0005.jpg

ಕಾಸರಗೋಡು: ಕೊಲೆ ಯತ್ನ, ಗಾಂಜಾ ಸಾಗಾಟ, ಮಾರಾಟ, ಅಪಹರಣ ಪ್ರಕರಣದ ಆರೋಪಿ ವಿರುದ್ಧ ಕಾಸರಗೋಡು ಕಾಫಾ ಕಾಯ್ದೆಯನ್ನು ಹೂಡಿದ್ದಾರೆ.

ಉಳಿಯತ್ತಡ್ಕ ಬಿಲಾಲ್ ನಗರದ ಅಬ್ದುಲ್ ಸಮದ್ (28)ನ ವಿರುದ್ಧ ಕಾಫಾ ಕಾಯ್ದೆ ಹೂಡಲಾಗಿದೆ. ಈತನ ವಿರುದ್ಧ 20 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರ ವರದಿಯಂತೆ ಜಿಲ್ಲಾಧಿಕಾರಿರವರು ಕಾಫಾ ಕಾಯ್ದೆಯನ್ನು ಹೂಡಿದ್ದಾರೆ.

ಕಾಸರಗೋಡು, ವಿದ್ಯಾನಗರ, ಬದಿಯಡ್ಕ, ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳು ಈತನ ಮೇಲಿದ್ದು, ಗಾಂಜಾ, ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣಗಳು ಪ್ರಮುಖ ಆರೋಪಿಯಾಗಿದ್ದಾನೆ.
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ 28 ಕಿಲೋ ಗಾಂಜಾ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮದ್ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದಲ್ಲದೆ ಮಾದಕ ವಸ್ತು ಸಾಗಾಟ, ಕೊಲೆ ಯತ್ನ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣ ಗಳಲ್ಲಿ ಈತ ಆರೋಪಿ ಯಾಗಿದ್ದು, ಈ ಹಿನ್ನಲೆಯಲ್ಲಿ ಈತನ ವಿರುದ್ಧ ಗೂಂಡಾ ಕಾಯಿದೆ ಯಾದ ಕಾಫಾ ವನ್ನು ಹೂಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!