November 22, 2024

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಪೈಗಂಬರ್ ವಿರುದ್ಧ ಅವಹೇಳನಕಾರಿ ಸಂದೇಶ ಬರಹ:
ಸುಳ್ಯ ವೃತ್ತ ನಿರೀಕ್ಷಕರಿಗೆ ದೂರು

0

ಸುಳ್ಯ: ಕೆಲವು ದಿನಗಳ ಹಿಂದೆ ಮುಸಲ್ಮಾನ ಬಾಂಧವರ ಅತ್ಯಂತ ಪ್ರೀತಿಪಾತ್ರರಾದ ಪೈಗಂಬರ್ ಮೊಹಮ್ಮದ್ ರವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ಬುಕ್ಕಿನಲ್ಲಿ ಅವಹೇಳನಕಾರಿ ಸಂದೇಶವನ್ನು ಹರಿಬಿಟ್ಟಿದ್ದು ಆ ವ್ಯಕ್ತಿಯ ಮೇಲೆ ಕಾನೂನಿನಡಿಯಲ್ಲಿ ಕಠಿಣ ಕ್ರಮವನ್ನು ಕೈ ಗೊಳ್ಳುವಂತೆ ಆಗ್ರಹಿಸಿ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಸಂಘಟನೆ ವತಿಯಿಂದ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರಿಗೆ ಇಂದು ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಇಕ್ಬಾಲ್ ಎಲಿಮಲೆ, ಸಹ ಸಂಚಾಲಕರಾದ ಕೆಎಸ್ ಉಮ್ಮರ್, ಮುಸ್ತಫ ಪೈಚಾರ್, ಸದಸ್ಯರುಗಳಾದ ಹಾಜಿ ಇಬ್ರಾಹಿಂ ಕತ್ತರ್, ಹಾಜಿ ಮುಸ್ತಪಾ ಜನತಾ, ಹಾಜಿ ಅಬ್ದುಲ್ ಸಮದ್ ಮೊಗರ್ಪಣೆ, ಶಾಫಿ ಬೆಳ್ಳಾರೆ, ಆ ರ್ಬಿ ಬಷೀರ್ ಪೈಚಾರ್, ಶರೀಫ್ ಕಂಠಿ, ರಶೀದ್ ಜಟ್ಟಿಪಳ್ಳ, ಎ ಕೆ ಹಸೈನಾರ್ ಕಲ್ಲುಗುಂಡಿ, ರಫೀಕ್ ಪಡು, ಅಕ್ಬರ್ ಕರಾವಳಿ, ಉವೈಸ್ ಲ್ಯಾಪ್ ಶಾಪ್, ಫೈಝಲ್ ಬೆಳ್ಳಾರೆ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!