ಮಡಿಕೇರಿ: ಕುವೈತ್‌ನಿಂದ ಬಂದಿಳಿದ ವ್ಯಕ್ತಿಗೆ ಹೃದಯಾಘಾತ: ವಿಮಾನ ನಿಲ್ದಾಣದಲ್ಲೇ ಸಾವು
ಮಡಿಕೇರಿ: ವರ್ಷಗಳ ಕಾಲ ಕುವೈತ್‌ನಲ್ಲಿ ದುಡಿದು, ಕುಟುಂಬದೊಂದಿಗೆ ಸಮಯ ಕಳೆಯಲು ಸ್ವದೇಶಕ್ಕೆ ಮರಳಿದ್ದ ಸುಂಟಿಕೊಪ್ಪದ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಸುಂಟಿಕೊಪ್ಪ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ ಬಶೀರ್ ಮೃತ ದುರ್ದೈವಿ. ಹೌದು, ಬದುಕು ಕಟ್ಟಿಕೊಳ್ಳಲೆಂದು ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದ ಕುವೈತ್‌ಗೆ ತೆರಳಿದ್ದ ಬಶೀರ್, ಹಲವು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದರು. ತಾವು ದುಡಿದ ಹಣವನ್ನು ಸುಂಟಿಕೊಪ್ಪದಲ್ಲಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕಳುಹಿಸುತ್ತಿದ್ದರು.
ಇದೇ ಹಣದಿಂದ ಕುಟುಂಬದ ಜೀವನ ಸಾಗುತ್ತಿತ್ತು. ವರ್ಷಗಳ ಬಳಿಕ ಸಿಕ್ಕ ರಜೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಬೇಕೆಂಬ ಆಸೆಯಿಂದ ಬಶೀರ್ ಕುವೈತ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು.




