ಭಾರತ್ ಜೋಡೋ ಯಾತ್ರೆ ಇಂದಿನಿಂದ ಮತ್ತೆ ಆರಂಭ: ಮಂಡ್ಯದಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ
ಬೆಂಗಳೂರು: ಎರಡು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಇಂದಿನಿಂದ ಮತ್ತೆ ಆರಂಭವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕೂಡಾ ಸೇರ್ಪಡೆಯಾಗಿದ್ದಾರೆ.
ಪಾಂಡವಪುರ ತಾಲೂಕಿನಿಂದ ಬೆಳಗ್ಗೆ 6.30ಕ್ಕೆ ಪುನರಾರಂಭಗೊಂಡ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಂಡಿದ್ದು, ಸುಮಾರು 12 ನಿಮಿಷಗಳ ಕಾಲ ಹೆಜ್ಜೆಹಾಕಿದರು. ಇಂದಿನ ಯಾತ್ರೆಯು ಸಂಜೆ 7 ಗಂಟೆಗೆ ನಾಗಮಂಗಲ ತಾಲೂಕಿನಲ್ಲಿ ಅಂತ್ಯಗೊಳ್ಳಲಿದೆ.
ಪಾದಯಾತ್ರೆ ಬಳಿಕ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಸಭೆ ನಡೆಯಲಿದೆ. ನಾಗಮಂಗಲ ತಾಲೂಕಿನ ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ಎದುರಿನ ಮಡಕೆ ಹೊಸೂರು ಗೇಟ್ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.




