ಒಂದೇ ಮದುವೆ, ಎರಡು ಮಕ್ಕಳಿಗೆ ಮಾತ್ರ ಅವಕಾಶ ನೀಡಬೇಕು: ಶಾಸಕ ಬಸನಗೌಡ ಪಾಟೀಲ ಯತ್ನಾಳ
ಬಾಗಲಕೋಟೆ: ದೇಶದಲ್ಲಿ ಎಲ್ಲರೂ ಒಂದೇ ಮದುವೆಯಾಗಬೇಕು. ಎರಡು ಮಕ್ಕಳನ್ನು ಹಡಿಯಬೇಕು. ಇದನ್ನು ಒಪ್ಪದವರಿಗೆ ಮಹಾತ್ಮ ಗಾಂಧಿ ಪಾಲು ಮಾಡಿಕೊಟ್ಟಿದ್ದಾರೆ. ಅಲ್ಲಿಗೆ ಹೊಯಕೊಂತ ಹೋಗರಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಬಾಗಲಕೋಟೆಯ ನವನಗರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಡನಾಡಿದ ಅವರು, ದೇಶದಲ್ಲಿ ಕಾಮನ್ ಸಿವಿಲ್ ಕೋಡ್ ಜಾರಿಗೊಳಿಸಲಾಗುವುದು ಎಂದರು.
ವಕ್ಫ್ ಕಾನೂನು ರದ್ದು ಮಾಡಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತಿದ್ದೇವೆ. ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.




