ಭದ್ರತಾ ಸಿಬ್ಬಂದಿಗಳ ಕರ್ತವ್ಯದ ಅವಧಿಯಲ್ಲಿ ಚಹಾ, ತಿಂಡಿ ತರಲು ಬಳಸಿಕೊಳ್ಳುವಂತಿಲ್ಲ: ಏಮ್ಸ್ ಆದೇಶ
ನವದೆಹಲಿ: ಭದ್ರತಾ ಸಿಬ್ಬಂದಿಗಳ ಕರ್ತವ್ಯದ ಅವಧಿಯಲ್ಲಿ ಚಹಾ, ತಿಂಡಿ ತರಲು ಬಳಸಿಕೊಳ್ಳುವಂತಿಲ್ಲ ಎಂದು ಏಮ್ಸ್ ಮಹತ್ವದ ಆದೇಶ ಮಾಡಿದೆ.
ಕೆಲಸದ ಅವಧಿಯಲ್ಲಿ ವೈದ್ಯರು ಅಥವಾ ಇತರೆ ಸಿಬ್ಬಂದಿಗೆ ಚಹಾ ಮತ್ತು ಉಪಹಾರಗಳನ್ನು ತರದಂತೆ ಭದ್ರತಾ ಸಿಬ್ಬಂದಿಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಹೇಳಿದೆ. ಎಐಐಎಂಎಸ್‌ನ ನೂತನ ನಿರ್ದೇಶಕ ಎಂ ಶ್ರೀನಿವಾಸ್ ಗುರುವಾರ ಹಿರಿಯ ಸಿಬ್ಬಂದಿಯ ವಿರುದ್ಧ ತೀವ್ರ ನಿಲುವು ತಳೆದಿದ್ದು, ಭದ್ರತಾ ಸಿಬ್ಬಂದಿಯನ್ನು ಅವರನ್ನು ನೇಮಕ ಮಾಡಿಕೊಂಡಿರುವ ಉದ್ದೇಶಕ್ಕೆ ಮಾತ್ರ ತೊಡಗಿಸಿಕೊಳ್ಳಬೇಕು ಮತ್ತು ಕೆಲಸದ ವೇಳೆಯಲ್ಲಿ ಚಹಾ ಮತ್ತು ತಿಂಡಿ ತರುವಂತೆ ಕೇಳುವ ಅಭ್ಯಾಸವನ್ನು ಬಿಡುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.