ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ 61ನೇ “ಶೌರ್ಯ” ವಿಟ್ಲ ಸಮಿತಿಯ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮ
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ಯೋಜನೆ ಬಿಸಿ ಟ್ರಸ್ಟ್ ವಿಟ್ಲ, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಪುತ್ತೂರು ಇದರ ಸಂಯೋಗದಲ್ಲಿ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ 61ನೇ “ಶೌರ್ಯ” ಸಮಿತಿಯ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮವನ್ನು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ವಿಟ್ಲ ನಾಡ ಕಚೇರಿಯ ಉಪತಾಶಿಲ್ದಾರದ ಶ್ರೀಯುತ ವಿಜಯ ವಿಕ್ರಮ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಆಕಸ್ಮಿಕವಾಗಿ ವಿಪತ್ತುಗಳನ್ನು ಎದುರಿಸಲು ಕಂದಾಯ ಇಲಾಖೆಯೊಂದಿಗೆ ಗ್ರಾಮ ವ್ಯಾಪ್ತಿಯ ವಿಪತ್ತು ನಿರ್ವಹಣಾ ತಂಡಗಳು ಕೈಜೋಡಿಸಿ ದಾಗ ವಿಪತ್ತು ನಿರ್ವಹಣೆ ಯಶಸ್ವಿ ಆಗುತ್ತೆ ಎಂದು ಹೇಳಿದರು.
ವಿಟ್ಲ ಪೊಲೀಸ್ ಠಾಣೆಯ ಎಸೈ ಸಂದೀಪ್ ಕುಮಾರ್ ಶೆಟ್ಟಿ ಮಾತನಾಡಿ ಧರ್ಮಸ್ಥಳ ಯೋಜನೆಯ ಗ್ರಾಮ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡ ರಚಿಸಿದ್ದು ಶ್ಲಾಘನೀಯವಾದದ್ದು. ಯಾಕೆಂದರೆ ಕೇಂದ್ರ ಸ್ಥಾನದಲ್ಲಿರುವ ವಿಪತ್ತು ನಿರ್ವಹಣಾ ತಂಡಗಳು ವಿಪತ್ತು ನಡೆದ ಸ್ಥಳಕ್ಕೆ ಭೇಟಿ ನೀಡಲು ಬಹಳ ಸಮಯ ತಗಳುವುದರಿಂದ ಆ ಸಮಯದಲ್ಲಿ ಕೂಡಲೇ ಸ್ಪಂದಿಸುವಂತಹ ಸ್ಥಳೀಯ ತಂಡಗಳು ಅಗತ್ಯ ಬಹಳಷ್ಟು ಇದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆಯ ವಿಟ್ಲ ವಲಯ ಅಧ್ಯಕ್ಷರಾದ ಶ್ರೀಯುತ ಕೃಷ್ಣಯ್ಯ ಬಲ್ಲಾಳ್ ವಹಿಸಿದ್ದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ವಿಟ್ಲ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ನಾಯಕ್, ಪುತ್ತೂರು ಅಗ್ನಿಶಾಮಕ ಠಾಣೆಯ ಠಾಣಾ ಅಧಿಕಾರಿ ಶಂಕರ್, ಠಾಣಾ ಮುಖ್ಯಸ್ಥರಾದ ಲೀಲಾದರ್, ಜನಜಾಗ್ರತಿ ವೇದಿಕೆ ವಿಟ್ಲ ಇದರ ಸದಸ್ಯರಾದ ನಟೇಶ್ ವಿಟ್ಲ, ಜನಜಾಗ್ರತಿಕೆ ವೇದಿಕೆಯ ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿ ಇದರ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ,ವಿಪತ್ತು ವಿಭಾಗ ಬೆಳ್ತಂಗಡಿ ಇದರ ಯೋಜನೆ ಅಧಿಕಾರಿ ಜೈವಂತ ಪಟಗಾರ,ವಿಟ್ಲ ತಾಲೂಕು ಯೋಜನಾ ಅಧಿಕಾರಿ ಚಿನ್ನಪ್ಪ ಗೌಡ, ವಿಟ್ಲ ವಲಯ ಮೇಲ್ವಿಚಾರಕಿ ಸರಿತಾ, ಮಾಣಿ ವಲಯ ಮೇಲ್ವಿಚಾರಕಿ ವಿನೋದ, ಮೇಲ್ವಿಚಾರಕರುಗಳಾದ ಸುಗುಣಶೆಟ್ಟಿ, ಮಾಲತಿ, ಸರಿತಾ, ಮೋಹಿನಿ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.