ಮಿತ್ತೂರು: ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಬೆಂಗಳೂರು ಪೊಲೀಸರ ತಂಡ ಭೇಟಿ: ಕೆ.ಜೆ ಹಳ್ಳಿ ಮತ್ತು ಡಿ.ಜೆ ಹಳ್ಳಿ ಪ್ರಕರಣ ಹಿನ್ನೆಲೆ
ವಿಟ್ಲ: ನೇರಳಕಟ್ಟೆ ಮಿತ್ತೂರು ಫ್ರೀಡಮ್ ಕಮ್ಯುನಿಟಿ ಹಾಲ್ ಗೆ ಬೆಂಗಳೂರು ಪೊಲೀಸರ ತಂಡ ಆಗಮಿಸಿ ಸ್ಥಳ ಮಜರು ನಡೆಸಿದ್ದಾರೆ.
ಕೆ. ಜೆ. ಹಳ್ಳಿ ಹಾಗೂ ಡಿ. ಜೆ. ಹಳ್ಳಿ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬ ನೇರಳಕಟ್ಟೆ ಹಾಲ್ ನಲ್ಲಿ ವಾಸ್ತವ್ಯ ಮಾಡಿದ ಬಗ್ಗೆ ತನಿಖೆ ಸಂದರ್ಭ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಬೆಂಗಳೂರು ಪೋಲೀಸರ ತಂಡ ಆರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ.






