September 27, 2026

200 ಕೋಟಿ ರೂ. ವಂಚನೆ ಪ್ರಕರಣ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಜಾಮೀನು ಮಂಜೂರು

0
image_editor_output_image-1490350514-1664173661636.jpg

ನವದೆಹಲಿ: 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಪಾಟಿಯಾಲ ಹೌಸ್ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ವಂಚಕ ಸುಕೇಶ್ ಚಂದ್ರಶೇಖರ್ ಮತ್ತಿತರರೊಂದಿಗೆ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ನೀಡಿದ್ದ ನಟಿ ಜಾಕ್ವೆಲಿನ್  ಸೋಮವಾರ ನ್ಯಾಯಾಲಯಕ್ಕೆ ಆಗಮಿಸಿದರು. ನಟಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು.

 

ಹೆಚ್ಚುವರಿ  ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲ್ಲಿಕ್ ಜಾಮೀನು ಅರ್ಜಿ ಕುರಿತು ಇಡಿಯಿಂದ ಪ್ರತಿಕ್ರಿಯೆ ಬಯಸಿದರು. ಜಾಕ್ವೆಲಿನ್ ಪರ ವಕೀಲರ ಮನವಿ ಮೇರೆಗೆ ರೂ. 50,000 ಬಾಂಡ್ ನೊಂದಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿ, ಮುಂದಿನ  ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿತು.  

ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇಂದು  ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಮನ್ಸ್ ಹೊರಡಿಸಿತ್ತು.

Leave a Reply

Your email address will not be published. Required fields are marked *

You may have missed

error: Content is protected !!