September 27, 2026

ಸುಳ್ಯ: ಬೈಕ್, ರಿಕ್ಷಾ ನಡುವೆ ಅಪಘಾತ, ಬೈಕ್ ಸವಾರ, ಐಟಿಐ ವಿದ್ಯಾರ್ಥಿ ಮೃತ್ಯು

0
image_editor_output_image-963417990-1664173071398.jpg

ಸುಳ್ಯ: ಸುಳ್ಯದ ಪರಿವಾರಕಾನ ಬಳಿ ಬೈಕ್ ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ, ಐಟಿಐ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ 9.15ರ ಸುಮಾರಿಗೆ ನಡೆದಿದೆ.

ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಪುತ್ರ ಪ್ರತೀಕ್ (19) ಮೃತಪಟ್ಟ ವಿದ್ಯಾರ್ಥಿ.

 

ರಾಘವೇಂದ್ರ ಬೇಕರಿಯಲ್ಲಿ ಕೆಲಸ ಮಾಡತ್ತಿರುವ ತೇಜಸ್‌ ಎಂಬ ಯುವಕನ ಜೊತೆ ಇಂದು ಬೆಳಗ್ಗೆ ಕಲ್ಲುಗುಂಡಿಯಿಂದ ಬೈಕ್‌ನಲ್ಲಿ ಪ್ರತೀಕ್ ಸುಳ್ಯದ ಕಡೆಗೆ ಬರುತ್ತಿದ್ದರು.

ಈ ವೇಳೆ ಪರಿವಾರಕಾನ ತಿರುವಿನಲ್ಲಿ ಆಟೋರಿಕ್ಷಾವೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್‌ ಸವಾರರಿಬ್ಬರೂ ಗಂಭೀರ ಗಾಯಗೊಂಡಿದ್ದು, ಕೂಡಲೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ವೇಳೆಗಾಗಲೇ ಪ್ರತೀಕ್ ಮೃತಪಟ್ಟರು. ಗಂಭೀರ ಗಾಯಗೊಂಡಿರುವ ತೇಜಸ್‌ರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!