ಕೆಟ್ಟು ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು
ಕುಣಿಗಲ್: ಕೆಟ್ಟು ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಜ್ಯ ಹೆದ್ದಾರಿ 33 ಗಿರಿಗೌಡನಪಾಳ್ಯ ಕರೆಕಲ್ಲು ಬಾರೇ ಬಳಿ ಮಧ್ಯರಾತ್ರಿ ಸಂಭವಿಸಿದೆ.
ಗಿರಿಗೌಡನಪಾಳ್ಯ ಗ್ರಾಮದ ನಿವಾಸಿ ಮಹೇಶ್ (23) ಮೃತ ಯುವಕ.
ಕೆಲಸದ ನಿಮಿತ್ತ ಕುಣಿಗಲ್ ಪಟ್ಟಣಕ್ಕೆ ಬಂದು, ತನ್ನ ಗ್ರಾಮಕ್ಕೆ ಹಿಂತಿರುಗಿ ಹೊಗುವಾಗ, ತುಮಕೂರು ಕಡೆಯಿಂದ ಮದ್ದೂರು ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೆಟ್ಟು ನಿಂತ್ತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




