March 24, 2026

ಮಲ್ಪೆ: ಈಜಲೆಂದು ನೀರಿಗೆ ಇಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು

0
image_editor_output_image-856601596-1664169991240.jpg

ಮಲ್ಪೆ: ಈಜಲೆಂದು ನೀರಿಗೆ ಇಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೂಡೆ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಭಾನುವಾರ ಸಂಜೆ 6 ಗಂಟೆಗೆ ಸಂಭವಿಸಿದ್ದು, ನಾಪತ್ತೆಯಾಗಿದ್ದ ವಿದ್ಯಾರ್ಥಿ ಹೈದರಬಾದ್ -ನ ಶ್ರೀಕರ ಅವರ ಮೃತದೇಹವೂ ಸೋಮವಾರ ಪತ್ತೆಯಾಗಿದೆ.

ಮೃತರನ್ನು ಬೆಂಗಳೂರಿನ ಷಣ್ಮುಖ (19), ನಿಶಾಂತ್ (19) ಹೈದರಬಾದ್ ನ ಶ್ರೀಕರ (19) ಎಂದು ಗುರುತಿಸಲಾಗಿದೆ.

ವಾರಾಂತ್ಯ ಹಿನ್ನಲೆಯಲ್ಲಿ ಮಣಿಪಾಲದ ಕಾಲೇಜಿನ 15 ವಿದ್ಯಾರ್ಥಿಗಳ ತಂಡ ಬೀಚ್ ಗೆ ತೆರಳಿತ್ತು. ಸಮುದ್ರದಲ್ಲಿ ನೀರಿನಲ್ಲಿ ಎಲ್ಲರೂ ನೀರಾಟವಾಡುತ್ತಿದ್ದರು.

ಈ ವೇಳೆ ಮೂವರು ಖಾಸಗಿ ಗೆಸ್ಟ್ ಹೌಸ್ ಸಮೀಪದವರೆಗೂ ಈಜುತ್ತಾ ಹೋಗಿದ್ದು, ಅಷ್ಟರಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.

ಇಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಸಾವನ್ನಪ್ಪಿದ್ದರು. ಇನ್ನು ನಾಪತ್ತೆಯಾಗಿದ್ದ ವಿದ್ಯಾರ್ಥಿ ಶ್ರೀಕರ್ ಮೃತದೇಹ ಸೆಪ್ಟೆಂಬರ್ 26 ಸೋಮವಾರ ಮುಂಜಾನೆ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!