March 24, 2026

ಮಂಗಳೂರು: ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ ಯುವಕ: ಯುವಕನ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ ?

0
IMG-20220925-WA0039

ಮಂಗಳೂರು: ನವ ವಿವಾಹಿತ ಯುವಕ ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಕ್ಕೂರಿನಲ್ಲಿ ನಡೆದಿದೆ. ಜಪ್ಪಿನಮೊಗರು ತಂದೋಳಿಗೆ ನಿವಾಸಿ ಧೀರಜ್ ಕುಲಾಲ್(32) ಮೃತ ದುರ್ದೈವಿ.

ಖಾಸಗಿ ಕಂಪನಿಯಲ್ಲಿ ಮಾರ್ಕೆಂಟಿಗ್ ಮ್ಯಾನೇಜರ್ ಆಗಿದ್ದ ಧೀರಜ್ ಆರೇಳು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ಧೀರಜ್ ಭಾನುವಾರ ಮಧ್ಯಾಹ್ನ ಎಕ್ಕೂರು ರೈಲ್ವೇ ಮೇಲ್ಸೇತುವೆ ಕೆಳಗಡೆಯ ರೈಲ್ವೇ ಹಳಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಧೀರಜ್ ಅವರ ತಾಯಿ ಗಿರಿಜಾ ಅವರು 1995 ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಂದೆ ತಾಯಿಗೆ ಪುಷ್ಪರಾಜ್ ಮತ್ತು ಧೀರಜ್ ಇಬ್ಬರೇ ಮಕ್ಕಳು. ಧೀರಜ್ ಅವರ ತಂದೆ, ಪತ್ನಿ ಸಾವಿನ ಬಳಿಕ‌ ಮಕ್ಕಳನ್ನ‌ ತೊರೆದು ಹೋಗಿದ್ದರು ಎನ್ನಲಾಗಿದೆ.

ಆನಂತರ, ಅನಾಥರಾಗಿದ್ದ ಧೀರಜ್ ಮತ್ತು ಪುಷ್ಪರಾಜ್ ದೊಡ್ಡಮ್ಮನ ಪಾಲನೆಯಲ್ಲಿ ಬೆಳೆದಿದ್ದರು. ಈ ನಡುವೆ, ಧೀರಜ್ ಅವರ ಸೋದರ ಪುಷ್ಪರಾಜ್ ಎರಡು ವರ್ಷಗಳ ಹಿಂದೆ ಪದವಿನಂಗಡಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಹೀಗೆ ಅಪಘಾತಗಳಲ್ಲೆ ತನ್ನವರನ್ನ ಕಳಕೊಂಡಿದ್ದ ಧೀರಜ್ ಕೂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದು ಅಕಾಲ ಮೃತ್ಯುವನ್ನು ತಂದುಕೊಂಡಿದ್ದಾರೆ. ಧೀರಜ್ ಸಾವು ಕುಟುಂಬ ಮತ್ತು ಸ್ನೇಹಿತರನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ. ಹಣಕಾಸಿನ ಮುಗ್ಗಟ್ಟು ಆತ್ಮ‌ಹತ್ಯೆಗೆ ಕಾರಣವೆಂದು ತಿಳಿದುಬಂದಿದೆ. ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!