March 24, 2026

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಒಳಉಡುಪಿನಲ್ಲಿ ಚಿನ್ನ ಸಾಗಾಟ: ಬಂಟ್ವಾಳದ ಪ್ರಯಾಣಿಕನಿಂದ 15.36 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

0
image_editor_output_image-377845215-1664114978717

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (MIA) ಕಸ್ಟಮ್ಸ್ ಅಧಿಕಾರಿಗಳು ಶನಿವಾರ ದುಬೈನಿಂದ ಹಿಂದಿರುಗಿದ ಪ್ರಯಾಣಿಕನೊಬ್ಬನಿಂದ 24 ಕ್ಯಾರೆಟ್ ಶುದ್ಧತೆಯ 306 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ಮೂಲದ ಪ್ರಯಾಣಿಕ ತನ್ನ ಬಟ್ಟೆ ಮತ್ತು ಒಳಉಡುಪಿನೊಳಗೆ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ಎನ್ನಲಾಗಿದೆ.

ವಶಪಡಿಸಿಕೊಂಡ ಚಿನ್ನದ ಮೌಲ್ಯ 15.36 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!