ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ:
ಈದ್ ಮಿಲಾದ್ ಪ್ರಯುಕ್ತ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಬಂಟ್ವಾಳ: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ (ರಿ) ವತಿಯಿಂದ ಮಿಲಾದುನ್ನಬಿ (ಈದ್ ಮಿಲಾದ್) ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ಜು ಏರ್ಪಡಿಸಲಾಗಿದೆ.
ಪ್ರವಾದಿ ಮುಹಮ್ಮದ್ ಪೈಗಂಬರ್ ( ಸ.ಅ) ರವರ ಬೋಧನೆಗಳು ಮತ್ತು ಆಧುನಿಕ ಬದುಕು ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದೆ.
ನಿಯಮಗಳು:
ಪ್ರಬಂಧವು ವಿಷಯಾಧಾರಿತವಾಗಿರಬೇಕು ಮತ್ತು ವಿದ್ಯಾರ್ಥಿಗಳು ಸ್ವತಃ ಕೈ ಬರಹದಲ್ಲಿ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಬರೆದಿರಬೇಕು.
*ಪ್ರಬಂಧವು A4 ಅಳತೆಯ ಕಾಗದದಲ್ಲಿ ಗರಿಷ್ಠ ಮೂರು ಪುಟಗಳನ್ನು ಮೀರದಂತಿರಬೇಕು.
*ಪ್ರಬಂಧವನ್ನು ಬರೆದಿರುವ ಯಾವುದೇ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ಕಾಲೇಜಿನ ಹೆಸರನ್ನು ಬರೆಯಬಾರದು. ಬದಲಾಗಿ ಪ್ರಬಂಧದ ಜೊತೆಯಲ್ಲಿ
ಒಂದು ಪ್ರತ್ಯೇಕ ಹಾಳೆಯಲ್ಲಿ ಸ್ಪರ್ಧಿಯ ಹೆಸರು, ತರಗತಿ, ಕಾಲೇಜಿನ ಹೆಸರು, ವಿಳಾಸ ಹಾಗೂ
ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳನ್ನು ಬರೆದು ಆಯಾಯ ಕಾಲೇಜಿನ ಪ್ರಾಂಶುಪಾಲರು ಸಹಿ ಮತ್ತು ಮುದ್ರೆಯೊಂದಿಗೆ ದೃಡೀಕರಿಸಬೇಕು.
- ಕಾಲೇಜಿನ ಮುಖ್ಯಸ್ಥರ ದೃಡೀಕರಣವಿಲ್ಲದ ಪ್ರಬಂಧಗಳನ್ನು ಪುರಸ್ಕರಿಸಲಾಗುವುದಿಲ್ಲ.
- ಬಿ.ಎ,ಬಿ.ಕಾಂ, ಬಿ.ಎಸ್ ಸಿ, ಬಿಬಿಎ, ಬಿಬಿಎಂ, ಬಿಸಿಎ, ಎಲ್ ಎಲ್. ಬಿ, ಬಿ. ಫಾರ್ಮಾ, ಬಿ.ಇ, ಮೊದಲಾದ ಪದವಿ ತರಗತಿಗಳ( 2022-23 ) ಯಾವುದೇ ಸೆಮಿಸ್ಟರ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದು.
- ಈ ಪ್ರಬಂಧ ಸ್ಪರ್ಧೆಯಲ್ಲಿ ಯಾವುದೇ ಸಮುದಾಯದ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು.
- ಸ್ಪರ್ಧೆಯು ಪ್ರಥಮ, ದ್ವಿತೀಯ ,ತೃತೀಯ ಮತ್ತು ಮೂರು ಪ್ರೋತ್ಸಾಹಕ ಬಹುಮಾನಗಳನ್ನು ಒಳಗೊಂಡಿದ್ದು ಅನುಕ್ರಮವಾಗಿ
ರೂಪಾಯಿ 5,000/, 4,000/, 3,000/ ಮತ್ತು 2,000/ ಗಳ ನಗದು ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ. - ಪ್ರಬಂಧವು ತಲುಪಬೇಕಾದ ಕೊನೆಯ ದಿನಾಂಕ:
08-10-2022.ರ ಶನಿವಾರ. - ಪ್ರಬಂಧವನ್ನು ಅಂಚೆ ಮೂಲಕ ಕಳುಹಿಸಬೇಕಾದ ವಿಳಾಸ:-
ಕೆ. ಅಬೂಬಕರ್
ವಕೀಲರು ಮತ್ತು ನೋಟರಿ,
ಮೇಗಿನಪೇಟೆ- ವಿಟ್ಲ, ಅಂಚೆ- ವಿಟ್ಲ,ಬಂಟ್ವಾಳ ತಾಲೂಕು- ದ. ಕ. ಪಿನ್ -574243.
Mobile 9448500874, 7892590799
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ:9980860880, 9980098515, 9611545686




