September 27, 2026

ಸೋಮವಾರಪೇಟೆ: ಚೂರಿಯಿಂದ ಇರಿದು ಮಹಿಳೆಯ ಹತ್ಯೆ: ಅಕ್ರಮ ಸಂಭಂದವೇ ಘಟನೆಗೆ ಕಾರಣ ಸ್ಥಳೀಯರ ಶಂಕೆ?

0
IMG-20220915-WA0007.jpg

ಸೋಮವಾರಪೇಟೆ: ತಾಲೂಕಿನ ಮಾದಾಪುರ ಗ್ರಾಮದ ಜಂಬೂರುಬಾಣೆಯ ಸಾಹೀರಾ (35) ಎಂಬ ಮಹಿಳೆ ಯನ್ನು ಸ್ಥಳೀಯ ವ್ಯಕ್ತಿಯೋರ್ವರು ಚೂರಿಯಿಂದ ಇರಿದು ಹತ್ಯೆಗೈದ ಘಟನೆ ವರದಿಯಾಗಿದೆ.

ಜಂಬೂರುಬಾಣೆಯ ಇಗ್ಗೋಡ್ಲುವಿನಲ್ಲಿ ಘಟನೆ ನಡೆದಿದ್ದು, ಆರೋಪಿ ಪೂವಯ್ಯ (ಬೊಳ್ಳು) ಪೋಲಿಸರಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ.

 

ಕಳೆದ ಹಲವಾರು ವರ್ಷಗಳಿಂದ ಇಬ್ಬರು ಪರಸ್ಪರ ಅಕ್ರಮ ಸಂಬಂಧ ಬೆಳೆಸಿದ್ದರು ಎಂದು ಶಂಕೆ ಕೇಳಿ ಬರುತ್ತಿದೆ.
ಆರೋಪಿ ಸ್ಥಳೀಯವಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ಆತನಿಗೆ ಪತ್ನಿ ಮತ್ತು ಮಕ್ಕಳಿದ್ದು, ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದರು.
ಮೃತ ಮಹಿಳೆಯ ಪತಿ ಕೆಲವು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದು ಆಕೆ ತನ್ನ ಎರಡು ಮಕ್ಕಳೊಂದಿಗೆ ಜಂಬೂರು ಬಾಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇಬ್ಬರು ಪುತ್ರರಲ್ಲಿ ಓರ್ವನಿಗೆ 15 ವರ್ಷ, ಮತ್ತೋರ್ವ 7ನೇ ವರ್ಷ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಸೋಮವಾರಪೇಟೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

You may have missed

error: Content is protected !!