OYO ರೋಮಿಗೆ ಕರೆದೊಯ್ದು ಬಾಲಕಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ
ಹೈದರಾಬಾದ್: ಓಯೋ ರೋಮಿಗೆ ಕರೆದೊಯ್ದು 17 ವರ್ಷದ ಬಾಲಕಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 13ರ ಮಂಗಳವಾರದಂದು ಈ ಘಟನೆ ನಡೆದಿದ್ದು, ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಏರಿಯಾದವರಾಗಿದ್ದು, ಪರಸ್ಪರ ಪರಿಚಯ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು 18 ಮತ್ತು 26 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದ್ದು, ಸಂತ್ರಸ್ತೆಯನ್ನು ಓಯೋ ರೂಮಿಗೆ ಕರೆದೊಯ್ದು, ಆಕೆಗೆ ಮಾದಕ ವಸ್ತು ನೀಡಿ ಎರಡು ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ. ಇದೀಗ ಈ ಸಂಬಂಧ ಸಂತ್ರಸ್ತೆ ಪೋಷಕರು ದೂರು ದಾಖಲಿಸಿದ್ದು, ದಬೀರ್‍ಪುರ ಪೊಲೀಸರು ಪ್ರಕರಣದ ಕುರಿತಂತೆ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.




