February 3, 2026

ಪುತ್ತೂರಿನ ತಿಂಗಲಾಡಿಯಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಅರೆಸ್ಟ್ – ಘಟನೆ ನಡೆದ ಮೂರು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

0
image_editor_output_image-182428881-1663211012924

ಪುತ್ತೂರು : ಪುತ್ತೂರಿನ ತಿಂಗಳಾಡಿಯ ಅಂಗಡಿಯಲ್ಲಿ ಸಾಮಾಗ್ರಿ ಖರೀದಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಘಟನೆ ನಡೆದ ಮೂರು ಗಂಟೆಯೊಳಗಾಗಿ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಮನೆಯ ಬದ್ರುದ್ದಿನ್ ಬಂಧಿತ ಆರೋಪಿ. ಈತನ ವಿರುದ್ದ ಐಪಿಸಿ ಸೆಕ್ಷನ್ 354 ರಂತೆ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ಟೀಟ್ ಸ್ಟಾಲ್ ಎಂಬ ಅಂಗಡಿಯಲ್ಲಿ ಸಂತ್ರಸ್ತ ಯುವತಿ ಸ್ವೀಟ್ ಖರೀದಿಸಿದ್ದರು. ಆಕೆ ಅಂಗಡಿ ಮಾಲೀಕರಿಗೆ ದುಡ್ಡು ಕೊಡುತ್ತಿದ್ದಾಗ ಏಕಾಏಕಿ ಅಂಗಡಿಗೆ ಬಂದ ಅಪರಿಚಿತ ಆರೋಪಿಯು ಮಹಿಳೆಯ ದೇಹವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ. ಈ ವೇಳೆ ಯುವತಿಯು ಬೊಬ್ಬೆ ಹಾಕಿ ಯುವತಿಯನ್ನು ದೂರ ತಳ್ಳಿದ್ದು ಆತ ಅಂಗಡಿಯಿಂದ ಪರಾರಿಯಾಗಿರುತ್ತಾನೆ. ಬಳಿಕ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಯುವತಿಯು ಈ ಬಗ್ಗೆ ದೂರು ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದೇಹವನ್ನು ಸ್ಪರ್ಶಿಸಿ ಮಾನಭಂಗ ಉಂಟು ಮಾಡಿದ ಆರೋಪಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ಬಂಧನದ ಸುದ್ದಿ ಖಚಿತವಾಗುತ್ತಲೇ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ಅನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೇ ಖಂಡನಾ ಸಭೆ ಪೂರ್ವ ನಿಗದಿಯಂತೆ ನಡೆಯಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!