May 11, 2026

ಮಂಜೇಶ್ವರ: ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ: ದೂರು ದಾಖಲು

0
image_editor_output_image806872331-1663172580312

ಮಂಜೇಶ್ವರ: ಕೆಲಸಕ್ಕೆಂದು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ಎಂಬಲ್ಲಿ ನಡೆದಿದೆ.

ಹೊಸಬೆಟ್ಟು ನಿವಾಸಿ, ದಿ. ತಿಮ್ಮಪ್ಪ ಅವರ ಪುತ್ರ ಗಿರೀಶ್ ಕುಮಾರ್(44) ನಾಪತ್ತೆಯಾದವರು. ಸೆ.12ರಂದು ಬೆಳಿಗ್ಗೆ ಕೆಲಸಕ್ಕೆಂದು ತೆರಳಿದ್ದರು. ಸಂಜೆ ಪತ್ನಿ ಜತೆ ದೂರವಾಣಿಯಲ್ಲಿ ಮಾತನಾಡಿದ್ದರು. ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಪತ್ನಿ ಮಂಜೇಶ್ವರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!