March 24, 2026

ಪುತ್ತೂರು: ಅಂಗಡಿಗೆ ಬಂದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಅನ್ಯಕೋಮಿನ ಯುವಕ ಆರೋಪ:
ಸ್ಥಳದಲ್ಲಿ ಜಮಾಯಿಸಿದ ನೂರಾರು ಹಿಂದೂ ಕಾರ್ಯಕರ್ತರು

0
IMG-20220914-WA0016.jpg

ಪುತ್ತೂರು: ತಿಂಗಳಾಡಿಯಲ್ಲಿ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸುತ್ತಿದ್ದ ಹಿಂದೂ ಮಹಿಳೆಗೆ ಅಂಗಡಿ ಮಾಲಕನಿಲ್ಲದ ಸಂದರ್ಭ ಅಲ್ಲಿದ್ದ ಮುಸ್ಲಿಂ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸ್ಥಳದಲ್ಲಿ ನೂರಾರು ಮಂದಿ ಹಿಂದೂ ಯುವಕರು ಜಮಾಯಿಸಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ.

ಸರ್ವೆ ನೇರೋಳ್ತಡ್ಕದ ಮಹಿಳೆಯೋರ್ವರು ಸೆ.14ರಂದು ಸಂಜೆ ತಿಂಗಳಾಡಿಯಲ್ಲಿರುವ ಸುಪರ್ ಬಝಾರ್ ಅಂಗಡಿಗೆ ಸಾಮಾನು ಖರೀದಿಸಲೆಂದು ಬಂದಿದ್ದರು. ಅಂಗಡಿ ಮಾಲಕ ಹಮೀದ್ ಪಟ್ಟೆ ಚಹಾ ಕುಡಿಯಲೆಂದು ಹೊರಗಡೆ ಹೋಗಿದ್ದ ಸಂದರ್ಭ ಅಂಗಡಿಯಲ್ಲಿದ್ದ ಸೊರಕೆ ಓಲೆಮುಂಡೋವು ಸಮೀಪದ ಬದ್ರುದ್ದೀನ್ ಯಾನೆ ಬದ್ರು ಎಂಬಾತ ಮಹಿಳೆಯ ಮೈಮೇಲೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದ ಪರಿಣಾಮ ಅಲ್ಲಿ ಜನ ಸೇರಿದ್ದರಿಂದ ಆರೋಪಿ ಬದ್ರುದ್ದೀನ್ ಯಾನೆ ಬದ್ರು ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆ ಸುದ್ದಿಯಾಗುತ್ತಲೇ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಹಿಂದೂ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು, ನೆರೆದವರು ಪೊಲೀಸರನ್ನು ಆಗ್ರಹಿಸಿದ್ದು ಸೆ.15ರ ಬೆಳಿಗ್ಗೆ 8 ಗಂಟೆಯೊಳಗೆ ಆರೋಪಿಯನ್ನು ಬಂಧಿಸದೇ ಇದ್ದಲ್ಲಿ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!