ಅನ್ಯ ಧರ್ಮದ ಯುವತಿಯೊಂದಿಗೆ ಸಂಬಂಧ: ಯುವಕನ ಕೊಲೆ ಮಾಡಿ ಮೃತದೇಹವನ್ನು ನದಿಗೆ ಎಸೆದ ಕುಟುಂಬ
ಅಹ್ಮದ್‍ನಗರ: ಅನ್ಯ ಧರ್ಮದ ಯುವತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಯುವಕನೋರ್ವನನ್ನು ಕೊಲೆ ಮಾಡಿ ಮೃತದೇಹವನ್ನು ನದಿಗೆ ಎಸೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ದೀಪಕ್ ಬರ್ಡೆ (31) ಕೊಲೆಯಾದ ಯುವಕ. 19 ವರ್ಷ ವಯಸ್ಸಿನ ಅನ್ಯ ಧರ್ಮದ ಯುವತಿ ಜೊತೆಗೆ ದೀಪಕ್ ಬರ್ಡೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಇದರಿಂದ ಯುವತಿ ಕುಟುಂಬದವರು ಆಕ್ರೋಶಿತಗೊಂಡು ಯುವಕನನ್ನು ಹತ್ಯೆ ಮಾಡಿದ್ದಾರೆ. ಬಳಿಕ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದು, ಯುವತಿಯ ತಂದೆ, ಸಹೋದರ ಸೇರಿದಂತೆ ಎಲ್ಲಾ ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನದಿಗೆ ಎಸೆದಿರುವ ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸದ್ಯ ಮೃತದೇಹದ ಹುಡುಕಾಟಕ್ಕಾಗಿ ಆರು ದೋಣಿಗಳನ್ನು ಬಳಸಿಕೊಳ್ಳಲಾಗಿದೆ.




