ಸುಳ್ಯ: ಇಲಿ ಜ್ವರಕ್ಕೆ ಯುವಕ ಬಲಿ
ಸುಳ್ಯ, ಇಲಿ ಜ್ವರಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಸುಳ್ಯ ತಾಲೂಕಿನ ಜಯನಗರದಲ್ಲಿ ವರದಿಯಾಗಿದೆ.
ನಿತ್ಯಾದರ್ ಸಮುದಾಯದ ಜಯನಗರ ರಿಚರ್ಡ್ ಕ್ರಾಸ್ತ ಮತ್ತು ಜುಲಿಯಾನ ಡಿಸೋಜ ಇವರ 2ನೇ ಮಗ ಆಕರ್ಷ್ ಎಲೋಸಿಯಸ್ ಕ್ರಾಸ್ತ(35) ಮೃತಪಟ್ಟ ಯುವಕ. ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಕರ್ಷ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಲ್ಲಿದ್ದರು ಎಂದು ತಿಳಿದು ಬಂದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರ ಮರಣದ ಅಂತಿಮ ವಿಧಿ ವಿಧಾನವು ಸೆ.11ರ ರವಿವಾರ ಅಪರಾಹ್ನ 3:00 ಗಂಟೆಗೆ ಮೆರ್ಸಿನ್ ಡಿಸೋಜ ಜಯನಗರ ಇವರ ಮನೆಯಿಂದ ಆರಂಭವಾಗಲಿದೆ. ಹಾಗೂ ಮೃತರ ಮರಣದ ಪೂಜೆಯು ಸಂಜೆ
3:30ಕ್ಕೆ ಸಂತ ಬ್ರಿಜಿತ್ ಚರ್ಚ್ ಸುಳ್ಯ ಇಲ್ಲಿ ನಡೆಯಲಿದೆ.





