August 17, 2026

ಕೊಡಂಗಾಯಿ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಮರ್ಹೂಂ ಶೈಖುನಾ  ಉಸ್ತಾದ್ ಅವರ 7ನೇ ಆಂಡ್ ನೇರ್ಚೆ ಸಮಾಪನ

0
image_editor_output_image-458821241-1786980903921

ವಿಟ್ಲ: ಕೊಡಂಗಾಯಿ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಶಿಲ್ಪಿ, ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 7ನೇ ಆಂಡ್ ನೇರ್ಚೆ  ಸಮಾಪನಗೊಂಡಿತು.

ಖತಮುಲ್ ಕುರಾನ್,  ಶೈಖುನಾ ಅಬೂಬಕ್ಕರ್ ಉಸ್ತಾದ್ ಅನುಸ್ಮರಣೆ, ಮೌಲಿದ್ ಮಜ್ಲಿಸ್  ನಂತರ ಸಮರೂಪ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶೈಖುನಾ ವಾಲೆ ಮುಂಡವು ಉಸ್ತಾದ್ ವಹಿಸಿದ್ದರು. ಸಂಸ್ಥೆಯ ಪ್ರಿನ್ಸಿಪಾಲ್ ಅಸಯ್ಯದ್ ಶಮೀಮ್ ತಂಙಳ್ ಟಿಪ್ಪು ನಗರ ಕಾರ್ಯಕ್ರಮ ಉದ್ಘಾಟಿಸಿದರು. ರಫೀಕ್ ಸಅದಿ ದೆಲಂಬಾಡಿ ಅನುಸ್ಮರಣೆ ಪ್ರಭಾಷಣ ನಡೆಸಿದರು. ಅಸಯ್ಯದ್ ಪೂಕುಂಞಿ ತಂಙಳ್ ಸಯ್ಯದ್ ಸಿಹಬುದ್ದೀನ್ ತಂಙಳ್ ಮದಕ, ಅಸಯ್ಯದ್ ಶಹೀರ್ ತಂಙಳ್ ಪೊಸೋಟೂ ಸಮಾರೂಪ ಪ್ರಾರ್ಥನೆಗೆ ನೇತೃತ್ವ ನೀಡಿದರು. ಮುತಹಲ್ಲಿಮ್ ಸಂಗಮ ತರಗತಿ ಮಂಡನೆ ಡಾ.ಅಬ್ದುಲ್ ರಶೀದ್ ಝೈನಿ ನಡೆಸಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂಎಸ್ ಮೊಹಮ್ಮದ್,  ಮುಮ್ಮದ್ ಅಲಿ ಸಖಾಫಿ ಅಶರಿಯ್ಯ,  ಅಶ್ರಫ್ ಸಹದಿ ಮಲ್ಲೂರು,  ವಿಟ್ಲ ಟೌನ್ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು,  ಡಾ. ಹಸೈನಾರ್ ಟಿಪ್ಪು ನಗರ, ಎ ಪಿ ಅಬೂಬಕ್ಕರ್ ಸಖಾಫಿ,  ಸಿಹಬುದ್ದೀನ್ ಸಖಾಫಿ ಈಶ್ವರ ಮಂಗಳ, ಅಬ್ದುಲ್ ಹಮೀದ್ ಲತೀಫ್ ಸೇರಾಜೆ,  ಹಸೈನಾರ್ ಮುಸ್ಲಿಯರ್ ಬಾರಬೆಟ್ಟು , ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ,  ಅಬೂಬಕ್ಕರ್ ಹಾಜಿ ವಸಂಗಡಿ,  ಸುಲೇಮಾನ್ ಹಾಜಿ ಸಿಂಗಾರಿ ಸ್ವಾಗತ ಸಮಿತಿ ಅಧ್ಯಕ್ಷರಾದ ಯೂಸುಫ್ ಸಾಜ,  ಇಬ್ರಾಹಿಂ ಮೋನು ಟಿಪ್ಪು ನಗರ,  ಕೆ ಎಂ ಜೆ ವಿಟ್ಲ ಝೋನ್ ಅಧ್ಯಕ್ಷರಾದ ಉಸ್ಮಾನ್ ಹಾಜಿ ಟಿಪ್ಪು ನಗರ , ಇಸ್ಮಾಯಿಲ್ ಪೆರುವಾಯಿ,  ಇಬ್ರಾಹಿಂ ಅಳಿಕೆ, ಎಸ್ ಎಮ್ ಎ ವಿಟ್ಲ ರೀಜನಲ್ ಅಧ್ಯಕ್ಷ  ರಝಾಕ್, ಎಸ್ ಜೆ ಎಂ ವಿಟ್ಲ ಅಧ್ಯಕ್ಷ ಕಾಸಿಂ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಕಡಂಬು,  ಅಬ್ರಹ್ಮಾನ್ ಹಾಜಿ ಕೊಡುಗಾಯಿ,  ಅಬ್ದುಲ್ ಖಾದರ್ ಮುಸ್ಲಿ ಯಾರ್ ಪರ್ತಿಪ್ಪಾಡಿ, ಅಬೂಬಕ್ಕರ್ ಹಾಜಿ ಉಕ್ಕುಡ, ಅಬ್ದುಲ್ ಹಕೀಮ್ ಕಂಬಳಬೆಟ್ಟು,  ಉಮ್ಮರ್ ವಿಟ್ಲ,  ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಅಬೂಬಕ್ಕರ್ ಲೆತೀಪಿ,  ಉಸ್ಮಾನ್ ಲತಿಪೀ,  ಅಬ್ದುಲ್ ರೆಹಮಾನ್ ಉಮೈದಿ, ಸುನ್ನಿ ಅಬೂಬಕ್ಕರ್ ಫೈಝಿ ಪೆರುವಾಯಿ,  ಇಬ್ರಾಹಿಂ ಮುಸ್ಲಿಯಾರ್ ಟಿಪ್ಪುನಗರ, ದಾರುನ್ನಜಾತ್ ದಾಮಮ್ ಸಮಿತಿ ಅಧ್ಯಕ್ಷ ಉಮಾರ್ ಹಾಜಿ,  ಸಿದ್ದಿಕ್ ಅಳಿಕೆ. ವಿಟ್ಲ ಝೋನ್ ಜಮಯ್ಯ ತುಲ್ ಉಲಮಾ ಅಧ್ಯಕ್ಷ  ಅಬ್ದುಲ್ ಖಾದರ್ ಫೈಝಿ,  ಎಸ್ ವೈ ಎಸ್ ವಿಟ್ಲ ಅಧ್ಯಕ್ಷ ರಹೀಂ ಸಖಾಫಿ, ರಝಾಕ್ ಅಂಮ್ಜದಿ, ಯೂನುಸ್ ಸಅದಿ ಟಿಪ್ಪು ನಗರ ಸಂಸ್ಥೆಯ ಜನರಲ್ ಮುಸ್ತಫ ಮುಡಿಪು ಉಪಸ್ಥಿತರಿದ್ದರು.

ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು.

Leave a Reply

Your email address will not be published. Required fields are marked *

You may have missed

error: Content is protected !!