October 10, 2026

ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶಿಷ್ಟತೆಯೊಂದಿಗೆ ವಿಜೃಂಭಿಸಿದ ಎಂಬತ್ತನೇ ಸ್ವಾತಂತ್ರ್ಯ ದಿನಾಚರಣೆ

0
image_editor_output_image-234412754-1786982100370

ಬಂಟ್ವಾಳ, ಆಗಸ್ಟ್ 15: ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕಡೇಶಿವಾಲಯ ಗ್ರಾಮದ ಬುಡೋಳಿ ಗಡಿಯಾರ ಪರಿಸರದಲ್ಲಿರುವ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆ ವಿಸ್ಡಮ್ ವಿದ್ಯಾ ಸಂಸ್ಥೆಯು, ದೇಶದ ಎಂಬತ್ತನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಿತು.


ಶಾಲಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಅಶ್ರಫ್ ಚಾವರ್ಕಾಡ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂಧರ್ಭದಲ್ಲಿ, ಶಾಲಾಡಳಿತ ಮಂಡಳಿಯ ಸದಸ್ಯರುಗಳಾದ, ಸರ್ವಶ್ರೀ ಅಬ್ದುಲ್ ಸಲೀಮ್ ಕೆ.ಸಿ. ರೋಡ್, ಮುನವ್ವರ್ ಹುಸೇನ್ ಗುರುವಾಯನಕೆರೆ, ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮುಸ್ತಫಾ, ಪದಾಧಿಕಾರಿಗಳಾಗಿರುವ, ಅಬ್ದುಲ್ ಮಜೀದ್, ಶ್ರೀಮತಿ ರಾಜೇಶ್ವರಿ, ಶ್ರೀಮತಿ ಫಾತಿಮಾ ಝಹರಾ ಅಲ್ಲದೆ ಮುಖ್ಯ ಶಿಕ್ಷಕಿ ಅಮೀನಾ ಬಾನು ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಗಣನೀಯ ಸಂಖ್ಯೆಯಲ್ಲಿ ಜನರು ಭಾಗವಹಿಸಿದರು.

 


ಸಭೆಯನ್ನುದ್ದೇಶಿಸಿ ಸ್ವಾತಂತ್ರ್ಯ ಸೇನಾನಿಗಳ ಹೆಸರುಗಳನ್ನು ಸ್ಮರಿಸಿ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಕಿರು ಭಾಷಣವನ್ನು ನೀಡಿದರು ಮತ್ತು ಶಾಲಾ ವಿದ್ಯಾರ್ಥಿಗಳು, ಆಂಗ್ಲ ಭಾಷೆ ಸೇರಿದಂತೆ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ದೇಶದ ಭಾವ್ಯಕ್ಯತೆ ಮತ್ತು ಸ್ವಾತಂತ್ರ್ಯದ ಸಮರದ ಹೆಜ್ಜೆ ಗುರುತುಗಳನ್ನು ವಿವರಿಸುತ್ತಾ ತಮ್ಮ ತಮ್ಮ ಭಾಷಣಗಳನ್ನು ಮಂಡಿಸಿದರು.
ಕೊನೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!