ವಿಟ್ಲದಲ್ಲಿ ನೂತನವಾಗಿ ಕರ್ನಾಟಕ ಕಾರ್ಸ್(MULTI BRAND USED CAR SHOWROOM) ಶುಭಾರಂಭ

ವಿಟ್ಲ: ವಿಟ್ಲದ ಬೊಬ್ಬೆಕೇರಿ ಶಾಂತಿನಗರದಲ್ಲಿ ನೂತನವಾಗಿ ಕರ್ನಾಟಕ ಕಾರ್ಸ್(MULTI BRAND USED CAR SHOWROOM) ಶುಭಾರಂಭಗೊಂಡಿತು.
ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಖತೀಬು ಮೊಹಮ್ಮದ್ ನಸೀಹ್ ದಾರಿಮಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಪ್ರಥಮ ಗ್ರಾಹಕ ಹರ್ಷ ಅವರಿಗೆ ಮಾಲಕ ಗಫೂರ್ ಮತ್ತು ಪುತ್ರ ಮಹಮ್ಮದ್ ಅಫ್ರೀದ್ ಅವರು ಕೀ ಹಸ್ತಾಂತರ ಮಾಡಿದರು.
ಈ ಸಂದರ್ಭ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಮಾಜಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಎಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ, ವಿಟ್ಲ ಲಯನ್ಸ್ ಕ್ಲಬ್ ಕೋಶಾಧಿಕಾರಿ ರವಿಶಂಕರ್, ವಿಟ್ಲ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಹಮೀದ್ ಬದ್ರಿಯಾ, ಸದಸ್ಯ ರಶೀದ್ ವಿ.ಎ, ಹಮೀದ್ ಪರ್ತಿಪ್ಪಾಡಿ, ಅಲಿ ಪರ್ತಿಪ್ಪಾಡಿ, ಇಕ್ಬಾಲ್ ಬೊಬ್ಬೆಕೇರಿ, ಅಬ್ದುಲ್ ಖಾದ್ರಿ ಬೊಬ್ಬೆಕೇರಿ, ಸಫ್ವಾನ್, ಮೊದಲಾದವರು ಉಪಸ್ಥಿತರಿದ್ದರು.
