ಅಡ್ಯನಡ್ಕ: ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ: ತಂಬಾಕು ನಿಯಂತ್ರಣ ತನಿಖಾ ದಳದ ತಂಡದಿಂದ ದಾಳಿ

ವಿಟ್ಲ: ತಂಬಾಕು ನಿಯಂತ್ರಣ ತನಿಖಾ ದಳದ ತಂಡವು ಅಡ್ಯನಡ್ಕ ಪರಿಸರದಲ್ಲಿ ನಿಯಮ ಮೀರಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪರಿಶೀಲಿಸಿ ಸೆಕ್ಷನ್ 4 ಹಾಗೂ ಸೆಕ್ಷನ್ 6 ಬಿ ಉಲ್ಲಂಘನೆ ನಡೆಸಿದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ ಕಾಯಿದೆ ಬಗ್ಗೆ ವಿವರಿಸಿ ಕಾನೂನಿನ ಚೌಕಟ್ಟಿನಲ್ಲಿ ವ್ಯಾಪಾರ ಮಾಡುವಂತೆ ಅರಿವು ಮೂಡಿಸಿ ಅಂಗಡಿ ಮುಂದೆ ಕಡ್ಡಾಯವಾಗಿ ಧೂಮಪಾನ ನಿಷೇಧಿಸಿದೆ ಎಂಬ ನಿಗದಿತ ನಾಮಫಲಕ ಪ್ರದರ್ಶಿಸುವಂತೆ ತಿಳಿಸಿತು.
ಕಾರ್ಯಾಚರಣೆಯಲ್ಲಿ ಸೆಕ್ಷನ್ 4 ಅಡಿಯಲ್ಲಿ 23 ಹಾಗೂ ಸೆಕ್ಷನ್ 6ಬಿ ಎರಡು ಪ್ರಕರಣ ದಾಖಲಿಸಿ ಒಟ್ಟು ರೂಪಾಯಿ 3,500 ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಆಹಾರ ಸುರಕ್ಷತಾ ಪ್ರಾಧಿಕಾರದ ಅಂಕಿತ ಅಧಿಕಾರಿಗಳಾದ ಡಾ. ಪ್ರವೀಣ್ ರವರು ಅಡ್ಯನಡ್ಕದಲ್ಲಿನ ಬೇಕರಿಗೆ ಭೇಟಿ ನೀಡಿ ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘನೆ ವಿರುದ್ಧ ದಂಡ ವಿಧಿಸಿದರು.
ಕಾರ್ಯಾಚರಣೆಯ ತಂಡದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಉಮೇಶ್ ಅಡ್ಯಂತಾಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಶ್ರುತಿ, ವಿಜಯ್ ,ವಿದ್ಯಾ ,ಕುಸುಮ ಹಾಗೂ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಉಪಸ್ಥಿತರಿದ್ದರು.
