August 12, 2026

ವಿಶ್ವ ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಟೆನಿಸ್‌ ಕ್ರೀಡೆಗೆ ವಿದಾಯ l

0
image_editor_output_image-1079492501-1662182616756.jpg

ನ್ಯೂಯಾರ್ಕ್: ವಿಶ್ವ ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಶನಿವಾರ ಟೆನಿಸ್‌ ಕ್ರೀಡೆಗೆ ವಿದಾಯ ಹಾಡಿದ್ದಾರೆ.

ತವರು ನಾಡಿನಲ್ಲಿ ಸಾಗುತ್ತಿರುವ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೋಲಿನೊಂದಿಗೆ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದರು.

ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, 46ನೇ ರ‍್ಯಾಂಕ್‌ನ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾನೊವಿಚ್ ವಿರುದ್ಧ 7-5, 6-7(4), 6-1ರ ಅಂತರದಲ್ಲಿ ಪರಾಭವಗೊಂಡರು.

ಮೊದಲ ಸೆಟ್‌ ಕಳೆದುಕೊಂಡ ಸೆರೆನಾ ದ್ವಿತೀಯ ಸೆಟ್‌ ಟೈ-ಬ್ರೇಕರ್‌ನಲ್ಲಿ ಗೆದ್ದು ಭರ್ಜರಿ ಪುನರಾಗಮನ ಮಾಡಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಹಿನ್ನಡೆ ಅನುಭವಿಸುವ ಮೂಲಕ ಸೋಲು ಅನುಭವಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!