March 25, 2026

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿವಾದ: ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್‌

0
image_editor_output_image825888144-1661865520317.jpg

ನವದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಅನುಮತಿ ನಿರಾಕರಿಸಿದೆ.

ಸುದೀರ್ಘ ಎರಡು ಗಂಟೆಗಳ ವಾದ ವಿವಾದವನ್ನು ಆಲಿಸಿದ ನಂತರ ಎರಡೂ ಬದಿಯ ಪಕ್ಷಕಾರರಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಪೀಠ ಆದೇಶಿಸಿದೆ.

ಸಂಜೆ ವಿಚಾರಣೆ ಬಳಿಕ ಬೆಂಗಳೂರು ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಪೂಜೆ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಿದ ಪೀಠ, ಗಣೇಶೋತ್ಸವದ ಪೂಜೆಯನ್ನು ಬೇರೆ ಎಲ್ಲಾದರೂ ಜರುಗಿಸಿ. ಸದ್ಯಕ್ಕೆ ಮುಂದುವರಿಯಬೇಡಿ. ಹೈಕೋರ್ಟ್‌ ಮುಂದೆ ಹೋಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ ಎಂದು ನ್ಯಾ. ಇಂದಿರಾ ಬ್ಯಾನರ್ಜಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!