March 25, 2026

ಕಾಸರಗೋಡು: ಕಾರು ಮತ್ತು ಮಿನಿ ಲಾರಿ ನಡುವೆ ಅಪಘಾತ: ಓರ್ವ ಮೃತ್ಯು, ಮೂವರು ಗಾಯ

0
n41735810816616118529058d7fc4b2275413a2906ca640978a7d245b2d597cf3ef4a68e4883c50862cb580.jpg

ಕಾಸರಗೋಡು: ಕಾರು ಮತ್ತು ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ಚೆರ್ವತ್ತೂರು ಸಮೀಪ ನಡೆದಿದೆ.

ತುರುತ್ತಿ ಓರ್ಕಲಂನ ಕೆ.ಪಿ. ರಜಿತ್ (31) ಮೃತಪಟ್ಟವರು. ಅಖಿಲ್ (30) ಸಿನೋಜ್ (33) ಮತ್ತು ಜಿತ್ತು (25) ಗಾಯಗೊಂಡವರು. ಗಾಯಾಳುಗಳನ್ನು ಕಣ್ಣೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.

ರಜಿತ್ ಹಾಗೂ ಸ್ನೇಹಿತರು ಶುಕ್ರವಾರ ಸಂಜೆ ಪರಶ್ಯಿನಿಕಡವಿಗೆ ತೆರಳಿ ಮರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಕಾರು ಮತ್ತು ಮೀನು ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಅಪಘಾತ ನಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಲ್ಲಿ ಸಿಲುಕಿದವರನ್ನು ಸ್ಥಳೀಯರು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ ಈ ವೇಳೆ ರಜಿತ್ ಮೃತಪಟ್ಟರು. ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!