July 18, 2026

ಮಂಗಳೂರಿನ ಪ್ರಧಾನಿ ಕಾರ್ಯಕ್ರಮಕ್ಕೆ ಶುಭಕೋರಿದ್ದಕ್ಕೆ ತುಳು ನಟರಿಗೆ ವಿರೋಧದ ಬಿಸಿ:
ಸೋಶಿಯಲ್ ಮೀಡಿಯಾದಲ್ಲಿ ನಟರ ವಿರುದ್ಧ ಆಕ್ರೋಶ

0
IMG-20220827-WA0011.jpg

ಮಂಗಳೂರು: ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಭೇಟಿ ನೀಡುತ್ತಿದ್ದು, ನವಮಂಗಳೂರು ಬಂದರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಆಯೋಜಿಸಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಹಿನ್ನೆಲೆ ತುಳುನಾಡಿನ ಮೇರು ನಟರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಬೋಜರಾಜ್ ವಾಮಂಜೂರು ಪ್ರಧಾನಿ ಅಗಮನಕ್ಕೆ ವಿಡಿಯೋ ಮುಖಾಂತರ ಶುಭಕೋರಿದ್ದಾರೆ. ಜೊತೆಗೆ ನಾವು ಕಾರ್ಯಕ್ರಮಕ್ಕೆ ಆಗಮಿಸುತ್ತೇವೆ ನೀವು ಬನ್ನಿ ಎಂದು ಮನವಿ‌ ಮಾಡಿಕೊಂಡಿದ್ದಾರೆ.

ಸದ್ಯ ಶುಭಹಾರೈಕೆಯ ವಿಡಿಯೋಗೆ ಪರ – ವಿರೋಧ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ನಟರು ಸ್ವಾಗತಿಸಿದ್ದು ಸರಿಯಲ್ಲ ಎನ್ನುವ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ. ಒಂದಷ್ಟು ಪೇಜ್ ಹಾಗೂ ಕೆಲವೊಬ್ಬರು ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!