August 18, 2026

ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಉದ್ಯೋಗ ನೇಮಕಾತಿಗಳಲ್ಲಿ ಸಂದರ್ಶನ ಎದುರಿಸುವುದು ಹೇಗೆ” ಕಾರ್ಯಾಗಾರ

0
image_editor_output_image1703373197-1661622040775

ವಿಟ್ಲ: ಕಲ್ಲಡ್ಕ - ಗೋಳ್ತಮಜಲು ಇಲ್ಲಿನ ಅನುಗ್ರಹ ಮಹಿಳಾ ಕಾಲೇಜಿನಲ್ಲಿ "ಉದ್ಯೋಗ ನೇಮಕಾತಿಗಳಲ್ಲಿ ಸಂದರ್ಶನ ಎದುರಿಸುವುದು ಹೇಗೆ" ಎಂಬುದರ ಕುರಿತು ಇತ್ತೀಚೆಗೆ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎಸ್.ಡಿ.ಎಮ್, ಪಿ.ಜಿ ಕಾಲೇಜು ಇಂಗ್ಲಿಷ್ ಪ್ರಾಧ್ಯಾಪಕ ಡಾ.ಮಾಧವ ಭಟ್ ರೆಸ್ಯೂಮ್ (ಬಯೋ ಡಾಟಾ) ತಯಾರಿಸುವುದು ಮತ್ತು ಸಂದರ್ಶನವನ್ನು ಎದುರಿಸುವುದು ಹೇಗೆ ಎಂಬ ವಿಷಯದಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಬಿ.ಡಿ, ಉಪ ಪ್ರಾಂಶುಪಾಲೆ ಮಮತಾ ಎಸ್.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಸೀಬ ಬಾನು ಸ್ವಾಗತಿಸಿ, ಫಾತಿಮ ನಸೀಫ ವಂದಿಸಿದರು, ಫಾತಿಮತ್ ಶಮುನ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!