ಮೃತಪಟ್ಟ ಬಿಜೆಪಿ ನಾಯಕಿ ಸೋನಾಲಿಯ ಶವಪರೀಕ್ಷೆಗೆ ಒಪ್ಪಿಗೆ: ಶವಪರೀಕ್ಷೆಯ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸುವಂತೆ ಷರತ್ತು
ಪಣಜಿ: ಎರಡು ದಿನಗಳ ಹಿಂದೆ ಮೃತಪಟ್ಟ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಶವಪರೀಕ್ಷೆಗೆ ಸಂಬಂಧಿಗಳಿಂದ ಷರತ್ತುಬದ್ಧ ಒಪ್ಪಿಗೆ ನೀಡಿದ್ದಾರೆ. ಶವಪರೀಕ್ಷೆಯ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಶವಪರೀಕ್ಷೆ ವರದಿ ಸಿಕ್ಕಿದ ಬಳಿಕ ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ವಿಡಿಯೊ ಚಿತ್ರೀಕರಿಸಬೇಕು ಎಂಬ ಷರತ್ತಿನೊಂದಿಗೆ ಶವಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದೇವೆ ಎಂದು ಗುರುವಾರ ಬೆಳಗ್ಗೆ ಸೋನಾಲಿ ಅವರ ಬಂಧು ಮೋಹಿಂದರ್ ಫೋಗಾಟ್ ತಿಳಿಸಿದ್ದಾರೆ.
ಗೋವಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶವಪರೀಕ್ಷೆ ನಡೆಸಲು ಈ ಮೊದಲು ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಸೋನಾಲಿ ಅವರ ಸಹೋದರ ರಿಂಕು ಧಾಕ ತನ್ನ ಸಹೋದರಿಯನ್ನು ಆಕೆಯ ಇಬ್ಬರು ಸಿಬ್ಬಂದಿಯೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ಬಳಿಕ ಶವಪರೀಕ್ಷೆಯನ್ನು ತಡೆ ಹಿಡಿಯಲಾಗಿದೆ.




