ಜಾರ್ಖಂಡ್‌ನಲ್ಲಿ ಭಾರೀ ಮಳೆ: 6 ಮಕ್ಕಳು ನೀರುಪಾಲು
ಮೇದಿನಿನಗರ: ಜಾರ್ಖಂಡ್‌ನ ಪಾಲಮು ಮತ್ತು ಹಝಾರಿಬಾಗ್ ಜಿಲ್ಲೆಗಳಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮಳೆಯಿಂದ ಉಂಟಾದ ಎರಡು ಪ್ರತ್ಯೇಕ ಅವಘಡಗಳಲ್ಲಿ ಆರು ಮಕ್ಕಳು ನೀರುಪಾಲಾಗಿದ್ದಾರೆ.
ಪಾಲಮು ಜಿಲ್ಲೆಯಲ್ಲಿ ಸತ್‌ಬಾರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರಾಫೈಟ್ ಗಣಿಯೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ಸಂದರ್ಭ ದುರ್ಘಟನೆ ಸಂಭವಿಸಿ, ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ನೀರಿಗೆ ಇಳಿದಿದ್ದ ಓರ್ವ ಬಾಲಕನನ್ನು ರಕ್ಷಿಸಲು ಮತ್ತಿಬ್ಬರು ಬಾಲಕರು ಪ್ರಯತ್ನಿಸಿದ್ದು, ಆ ಸಂದರ್ಭದಲ್ಲಿ ಮುಳುಗಿದ್ದಾರೆ. ಅವರ ಜತೆಗಿದ್ದ ಮತ್ತೋರ್ವ ಬಾಲಕ ಮರಳಿ ಬಂದು ಪಾಲಕರಿಗೆ ವಿಷಯ ತಿಳಿಸಿದ್ದಾನೆ.





