ಪೊಲೀಸ್ ವಾಹನದಲ್ಲೇ ಕುಳಿತು ಕೇಕ್ ಕತ್ತರಿಸಿದ ಕೊಲೆ ಆರೋಪಿ
ಮುಂಬೈ : ಕೊಲೆ ಆರೋಪಿಯೋರ್ವ ಪೊಲೀಸ್ ವಾಹನದಲ್ಲೇ ಕೇಕ್ ಕತ್ತರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದ್ದೂ ಅಲ್ಲದೆ ಇದು ಪೊಲೀಸರ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ.
ಕೊಲೆ, ಕೊಲೆ ಬೆದರಿಕೆ ಹೀಗೆ ಹಲವಾರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ರೋಷನ್ ಝಾ ಥಾಣೆಯ ಜೈಲಿನಲ್ಲಿದ್ದ, ಪ್ರಕರಣ ವಿಚಾರಣೆಗಾಗಿ ಜೈಲಿನಿಂದ ನ್ಯಾಯಾಲಯಕ್ಕೆ ಕರೊದೊಯ್ಯುವ ವೇಳೆ ಆರೋಪಿಯ ಬೆಂಬಲಿಗರು ತಂದಿದ್ದ ಕೇಕ್ ಒಂದನ್ನು ಪೊಲೀಸ್ ವಾಹನದಲ್ಲೇ ಕುಳಿತು ಕತ್ತರಿಸಿದ್ದಾನೆ.
ಅಲ್ಲದೆ ಆರೋಪಿಯ ಬೆಂಬಲಿಗರು ಕೇಕ್ ಕತ್ತರಿಸುವ ವಿಡಿಯೋ ಮಾಡಿ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.




