ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ
ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಾರಂಭದಲ್ಲಿ ಕುಮಾರಿ ಹಮೀದಾ ವಫಾ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಇವರು ಕಿರಾತ್ ಪಠಿಸಿದರು. ಅತಿಥಿಯಾಗಿ ಆಗಮಿಸಿದ ಅಬ್ದುಲ್ ಸಲಾಂ ಮಾಸ್ಟರ್ ಬಂಟ್ವಾಳ ಇವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ನಂತರ ರಾಷ್ಟ್ರೀಯ ಸೇವಾ ಹಾಗೂ ರೆಡ್ ಕ್ರಾಸ್ ಘಟಕದಿಂದ ರಾಷ್ಟ್ರಗೀತೆ ಹಾಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ, ಎಲ್ಲಾ ಗಣ್ಯ ಅತಿಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಬಿ.ಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿಯರಾದ ಕುಮಾರಿ ಫಾತಿಮತುಲ್ ಶೈಮಾ ಹಾಗೂ ಕುಮಾರಿ ಆಯಿಷತ್ ಶಬೀಬಾ ರವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಅಮೃತ ಮಹೋತ್ಸವದ ಪ್ರಯುಕ್ತ ನಡೆಸಲಾದ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನವನ್ನು ವಿತರಿಸಲಾಯಿತು, ಆಂಗ್ಲ ವಿಭಾಗದ ಉಪನ್ಯಾಸಕಿಯಾದ ಕುಮಾರಿ ಶ್ವೇತಾ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿಯಾದ ಅಶ್ವಿನಿ ರವರು ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಅಮಾನುಲ್ಲಾ ಖಾನ್ ರವರು ನಮ್ಮ ದೇಶವು ಸಾಂಸ್ಕೃತಿಕ ಮತ್ತು ವೈವಿಧ್ಯತೆ ಇಂದ ಸಂಪನ್ಮೂಲ ಭರಿತವಾಗಿದ್ದು ಅದರ ರಕ್ಷಣೆ ನಮ್ಮ ಎಲ್ಲರ ಕರ್ತವ್ಯ ಹಾಗೆಯೇ ನಮ್ಮ ದೇಶದ ಆಸ್ತಿಯನ್ನು ಮತ್ತು ದೇಶದ ಒಗ್ಗಟ್ಟನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕು ಎಂದು ಬಹಳ ಅರ್ಥಭರಿತವಾಗಿ ಹೇಳಿದರು.
ನಂತರ ಅತಿಥಿಯಾಗಿ ಆಗಮಿಸಿದ ಅಬ್ದುಲ್ ಸಲಾಂ ಮಾಸ್ಟರ್ ಬಂಟ್ವಾಳ ಇವರನ್ನು ಬಬಿತಾ ಲಸ್ರಾದೋರವರು ಪರಿಚಯಿಸಿದರು. ಇವರು “ನಮ್ಮ ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಭಿವೃದ್ಧಿಯತ್ತ ಸಾಗಬೇಕು ಇದಕ್ಕಾಗಿ ಎಲ್ಲರೂ ಪ್ರಯತ್ನಿಸಬೇಕು” ಎಂದು ತಿಳಿಸಿದರು. ನಂತರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್ ಇವರು ಅಧ್ಯಕ್ಷೀಯ ಭಾಷಣವನ್ನು ಮಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಶಾಹುಲ್ ಹಮೀದ್ ,ಸದಸ್ಯರುಗಳಾದ ಹಮೀದ್ ಬಂಟ್ವಾಳ, ಅಬ್ದುಲ್ಲ ಚೆ0ಡಾಡಿ, ಆದಮ್ ಇಸ್ಮಾಯಿಲ್, ಮುಖ್ತರ್ ಅಹಮದ್, ಶ್ರೀಯುತ ಅಬ್ದುಲ್ ಕು0ఞి ಹಾಗೂ ಉಪ ಪ್ರಾಂಶುಪಾಲರಾದ ಮಮಿತಾ ಎಸ್ ರೈ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೋಧಕ ,ಬೋಧಕೇತರ ವೃಂದದವರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಕುಮಾರಿ ನಸೀಫ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.






