ಕೆಮ್ಮಣ್ಣುಗುಂಡಿ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು
ಚಿಕ್ಕಮಗಳೂರು : ಕಾಫಿನಾಡಲ್ಲಿ ಮಳೆ ನಿಂತರು ಮಳೆಯ ಅವಾಂತರಗಳು ಕಡಿಮೆಯಾಗಿಲ್ಲ, ಇದರ ಮುಂದುವರೆದ ಭಾಗವಾಗಿ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ತರೀಕೆರೆ ತಾಲೂಕಿನ ಹೆಬ್ಬೆ ಮತ್ತು ಕೆಮ್ಮಣ್ಣುಗುಂಡಿಗೆ ಗುಂಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬಿರುಕು ಬಿಟ್ಟಿದ್ದು ರಸ್ತೆಯ ಎಡಬದಿಯಲ್ಲಿ ಸುಮಾರು ಮೂರು ಅಡಿ ಭೂಮಿ ಕುಸಿದಿದೆ.




