March 25, 2026

ಬಜ್ಪೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಆರೋಪ: ಆರೋಪಿಯ ಬಂಧನ

0
image_editor_output_image1270948632-1660122857401.jpg

ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಅದ್ಯಪಾಡಿ ಮೋಂತಿಬೈಲು ನಿವಾಸಿ ಮೊಹಮ್ಮದ್ ಅಝರುದ್ದೀನ್ ಅಲಿಯಾಸ್ ಅಝರ್‍ (31) ಬಂಧಿತ ಆರೋಪಿ. ಬಜಪೆ ಪೊಲೀಸರು ಪರಿಶೀಲನೆಗೆಂದು ಆಝರ್‌ನ ಮನೆಗೆ ಹೋಗಿದ್ದಾಗ ಆತ ಮತ್ತು ಆತನ ಕುಟುಂಬ ಪೊಲೀಸರಿಗೆ ನಿಂದಿಸಿ, ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಆತನ ಮತ್ತು ಆತನ ಕುಟುಂಬದ ವಿರುದ್ದ ದೂರು ದಾಖಲಾಗಿತ್ತು. ಈತ ಮೂಡುಬಿದಿರೆಯ ಕಳ್ಳಬೆಟ್ಟು ಮತ್ತು ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಜಾನುವಾರು ಕಳವು ಮಾಡಿದ್ದ. ಅಲ್ಲದೆ, ಬಂಧನ ತಪ್ಪಿಸಿಕೊಳ್ಳುವುದಕ್ಕಾಗಿ ತಲೆ ಮರೆಸಿಕೊಂಡಿದ್ದ.

ಬಜಪೆ ಮತ್ತು ಕಾರ್ಕಳ ನಗರ ಠಾಣೆಯಲ್ಲಿ ಎರಡು ಕಳ್ಳತನ ಮತ್ತು ಜಾನುವಾರು ಕಳ್ಳತನ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಮೂಡುಬಿದಿರೆ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಈ ಹಿಂದೆ ಈತನ ವಿರುದ್ದ ದಾಖಲಾಗಿತ್ತು.

Leave a Reply

Your email address will not be published. Required fields are marked *

error: Content is protected !!