March 25, 2026

ಮಡಿಕೇರಿ: ದಂಪತಿಯ ನಡುವೆ ನಡೆದ ಕಲಹ, ಗುಂಡು ಹಾರಿಸಿದ ಪತಿ, ಪತ್ನಿ ಮೃತ್ಯು

0
image_editor_output_image174992687-1660121284104.jpg

ಮಡಿಕೇರಿ : ದಂಪತಿಯ ನಡುವೆ ನಡೆದ ಕಲಹದಲ್ಲಿ ಪತಿ ಹಾರಿಸಿದ ಗುಂಡು ತಗುಲಿ ಪತ್ನಿ ಸಾವನ್ನಪ್ಪಿದ ಘಟನೆ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ.

ಬಟ್ಟೀರ ಷಷ್ಮ (44) ಎಂಬುವವರು ಗುಂಡೇಟಿನಿಂದ ಮೃತಪಟ್ಟ ಮಹಿಳೆ, ಪತಿ ಬಟ್ಟೀರ ಗೋಪಾಲ (ಕಿಶನ್) ಗುಂಡು ಹಾರಿಸಿದ ಆರೋಪಿ.

ಮಂಗಳವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿ ಗೋಪಾಲನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!