ಪಡುಬಿದ್ರಿ ಗಾಣಿಗರ ಮಿಲ್ ನಲ್ಲಿ ಅಗ್ನಿ ಅವಘಡ: 5 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನ ಕಾಯಿ ಬೆಂಕಿಗಾಹುತಿ
ಪಡುಬಿದ್ರಿ : ಕಣ್ಣಂಗಾರ್ ಬೈಪಾಸ್ ಬಳಿಯ ನಡ್ಸಾಲು ಗ್ರಾಮದ ಸುಶೀಲಾ ಗಾಣಿಗ ಮಾಲಕತ್ವದ ಗಾಣಿಗರ ಮಿಲ್ ನಲ್ಲಿ ಇಂದು ಮುಂಜಾವ ಅಗ್ನಿ ಅವಘಡವು ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಎನ್ನಲಾದ ಈ ಅಗ್ನಿ ಅವಘಡದಲ್ಲಿ ಸುಮಾರು 5 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನ ಕಾಯಿ ಬೆಂಕಿಗಾಹುತಿಯಾಗಿದೆ.
ಉಡುಪಿಯ ಅಗ್ನಿ ಶಾಮಕ ದಳದ ತುಕುಡಿಯು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಲಾಗಿದೆ.




